

ನರಗುಂದ: ಆಸೆ ಎಂಬುದು ಅರಸಂಗಲ್ಲದೇ ಅಜಾತರಿಗುಂಟೆ ಅಯ್ಯಾ ಎನ್ನುವಂತೆ ಆಸೆ ಇರಬೇಕು ದುರಾಸೆ ಇರಬಾರದು ಎಂದು ಶಶಿಧರ ಶಾಸ್ತ್ರೀಗಳು ಹೇಳಿದರು.
ನರಗುಂದ ತಾಲೂಕಿನ ಶಿರೋಳ ತೋಂಟದಾರ್ಯ ಶಾಖಾ ಮಠದಲ್ಲಿ ಆಯೋಜಿಸಿದ್ದ 20ನೇ ದಿನದ ಬಸವ ಪುರಾಣದಲ್ಲಿ ಪ್ರವಚನ ಮಾಡಿದ ಅವರು, ಪ್ರಜೆಗಳೇ ದೇವರೆಂದು ತಿಳಿದಿದ್ದ ಕಾಶ್ಮೀರದ ದೊರೆ ಮಹಾದೇವ ಭೂಪಾಲ, ನಿತ್ಯ ಜಂಗಾಮಾರ್ಚಣೆ ಇಲ್ಲದೆ ಪ್ರಸಾದ ಸೇವಿಸುತ್ತಿರಲಿಲ್ಲ, ಕಲ್ಯಾಣದಲ್ಲಿ ದೊಡ್ಡ ಸಂಖ್ಯೆಯ ಕಾಯಕದ ಶರಣರು ಬಸವಣ್ಣನವರ ಅನುಯಾಯಿಗಳಾಗಿರುವುದನ್ನು ತಿಳಿದು ಕಲ್ಯಾಣಕ್ಕೆ ಬಂದನು. ಕೊಲ್ಲಲು ಬಂದ ಚಿಕ್ಕಣ್ಣ ಬಸವಣ್ಣನವರ ಒಂದೇ ವಚನ ಮೌನದಲಿ ಉಂಬುವುದು ಆಚಾರವಲ್ಲ. ಲಿಂಗಾರ್ಚನೆ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವ ನಾಮ ಜಪಿಸಬೇಕು ಎನ್ನುವುದನ್ನು ಕೇಳಿ, ವಚನ ಬರೆಯುವ ತಾಡೋಲೆಗಳನ್ನು ಅಡವಿಯಿಂದ ತಂದು ಮಾರುವ ಕಾಯಕದಲ್ಲಿ ನಿರತನಾದನು.
ಚಿಕ್ಕಣ್ಣ ಶರಣಾನಾದ ಸುದ್ದಿ ತಿಳಿದ ಭೂಪಾಲನ ತಂಗಿ ಬೊಂತೆದೇವಿ ಕಲ್ಯಾಣದಲ್ಲಿ ಕೌದಿ ಹೊಲೆಯುವ ಕಾಯಕದಲ್ಲಿ ನಿರತಳಾದಳು. ದೊರೆ ಮಹಾದೇವ ಭೋಪಾಲನೊಂದಿಗೆ ಮಡದಿ ಗಂಗಾದೇವಿ ಪಟ್ಟಧರಿಸಿಯಾಗಿರಲು ನಿರಾಕರಿಸಿ ಬಂಗಾರ ಬಿಚ್ಚಿಟ್ಟು ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿಯುವ ಕಾಯಕದಿಂದ ಮೋಳಿಗೆ ಮಾರಯ್ಯನಾದನು. ಹಣ, ಬಂಗಾರ, ಅರಮನೆ ತ್ಯಜಿಸಿ ಬಂದ. ಆಸೆ ಇದ್ದಿದ್ದರೆ ಸ್ಮಶಾನಕ್ಕೆ ಹೊಗುತ್ತಿದ್ದೆ, ಆಸೆಯನ್ನು ಬಿಟ್ಟು ಕಲ್ಯಾಣಕ್ಕೆ ಬಂದಿದ್ದೇನೆ ಎಂದ ದೊರೆ ಮಹಾದೇವ ಭೂಪಾಲ ಇಂದಿನ ಸಮಾಜಕ್ಕೆ ಆದರ್ಶವಾಗಿರಬೇಕು ಎಂದರು.
ತೋಂಟದಾರ್ಯಮಠದ ಪೀಠಾಧಿಪತಿ ಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು, ಶಿವಾನಂದ ಯಲಿಬಳ್ಳಿ, ಗುರಬಸಯ್ಯ ನಾಗಲೋಟಿಮಠ, ವೀರಯ್ಯ ದೊಡಮನಿ, ಕುಮಾರ ಮರೆಗುದ್ದಿ, ಲೋಕಪ್ಪ ಕರಕೀಕಟ್ಟಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ ಗುರುಬಸವ ಶೆಲ್ಲಿಕೇರಿ, ಪ್ರಭಾಕರ ಉಳ್ಳಾಗಡ್ಡಿ, ಪ್ರಭು ಹದ್ಲಿ, ಮಲ್ಲಪ್ಪ ಸಂಗಳದ, ಶಂಕರಗೌಡ ಗಿರಿಯಪ್ಪಗೌಡ, ಶಂಕರಪ್ಪ ಕುಪ್ಪಸ್ತ, ಶ್ರೀಕಾಂತ ದೊಡಮನಿ, ಶ್ರೀಧರ ಬೇವಿನಕಟ್ಟಿ ಇದ್ದರು.
ರಾಷ್ಟ್ರ ಮಟ್ಟದ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಆದ ಶಿರೋಳ ಗ್ರಾಮದ ಮಣಿಕಂಠ ಮುತ್ತಪ್ಪ ಚವ್ವಾಣ ಅವರನ್ನು ಸನ್ಮಾನಿಸಲಾಯಿತು.