

ರೋಣ: ಕೆಲಸದಲ್ಲಿ ಪ್ರಾಮಾಣಿಕತೆ, ನಂಬಿಕೆ, ಶ್ರದ್ಧೆ ಇರಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಹೊಸಮನಿ ಹೇಳಿದರು.
ಪಟ್ಣಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಟರ್‌ಮನ್ ಮಲ್ಲಪ್ಪ ಮಾರನಬಸರಿ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುರಸಭೆ ಸದಸ್ಯ ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ, ಮಲ್ಲಪ್ಪ ಅವರ ಕೆಲಸ ಚಿಕ್ಕದಾದರೂ ಮಾಡುವ ಕಾರ್ಯ ದೊಡ್ಡದು. ನಮಗೆಲ್ಲರಿಗೂ ಅವರು ಆದರ್ಶರಾಗಿದ್ದಾರೆ ಎಂದರು.
ಮಲ್ಲಪ್ಪ ಮಾರನಬಸರಿ ಮಾತನಾಡಿ, ಪುರಸಭೆ ನೌಕರರು ಇಲ್ಲಿಯವರೆಗೆ ತೋರಿದ ಪ್ರೀತಿ, ಕಾಳಜಿಗೆ ಚಿರಋಣಿಯಾಗಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸಿಬ್ಬಂದಿ ಮಲ್ಲಪ್ಪ ಮಾರನಬಸರಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಫೋಟೋ-
30 ರೋಣ- 1
ಪಟ್ಣಣದ ಪುರಸಭೆ ಸಭಾಭವನದಲ್ಲಿ ವಾಟರ್‌ಮನ್ ಮಲ್ಲಪ್ಪ ಮಾರನಬಸರಿ ದಂಪತಿಯನ್ನು ಪುರಸಭೆ ಸಿಬ್ಬಂದಿ ಸನ್ಮಾನಿಸಿದರು. ಬಸಮ್ಮ ಕೊಪ್ಪದ, ಹನುಮಂತ ತಳ್ಳಿಕೇರಿ, ಎಂ.ಆರ್. ಹೊಸಮನಿ, ಸಂಗಪ್ಪ ಜಿಡ್ಡಿಬಾಗಿಲ ಇತರರಿದ್ದರು.