ಚಿತ್ರಕಲೆಯಲ್ಲಿ ಸೃಜನೆಶೀಲತೆ ಇರಲಿ

h17-Vimal Kulkarni
Published on

ಹುಬ್ಬಳ್ಳಿ: ಇಲ್ಲಿನ ಭವಾನಿನಗರದ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಇತ್ತೀಚೆಗೆ ರವಿವರ್ಮ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೆಳಗಾವಿ ಕಿತ್ತೂರ ಚನ್ನಮ್ಮ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ ಶಾಸ್ತ್ರಿ ಉದ್ಘಾಟಿಸಿ ಮಾತನಾಡಿ, ಮನೆಯಲ್ಲಿರುವ ಸಾಮಗ್ರಿ ಬಳಸಿ ಬಣ್ಣ ತಯಾರು ಮಾಡಬೇಕು. ಸೃಜನಶೀಲತೆಯು ಚಿತ್ರಕಲೆಯಲ್ಲಿ ಸದಾ ಮೂಡುತ್ತಿರಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾ ಶಿಕ್ಷಕ ಎಂ.ವೈ. ಬಡಿಗೇರ ಅವರು ಚಿತ್ರಕಲೆ ಸ್ಪರ್ಧೆಯ ನೀತಿ-ನಿಯಮಗಳ ಬಗ್ಗೆ ವಿವರಿಸಿದರು.

ರಶೀದ್ ಲಕ್ಷೆ್ಮೕಶ್ವರ, ಕಂಚನಮಾಲಾ, ಕಿರಣ ಪವಾರ, ಮದೀನಾ ಲಕ್ಷೆ್ಮೕಶ್ವರ ನಿರ್ಣಾಯಕರಾಗಿ ಆಗಮಿಸಿದ್ದರು.

ಗೆದ್ದ ಮಕ್ಕಳಿಗೆ ಬಹುಮಾನ, ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀರಂಗ ಹನುಮಸಾಗರ, ಪ್ರಾಂಶುಪಾಲೆ ಶ್ರೀದೇವಿ ಮಳಗಿ, ಮುಖ್ಯೋಪಾಧ್ಯಾಯಿನಿ ಅನಿತಾ ಬಾಗಲಕೋಟ, ಇತರರು ಇದ್ದರು.

ವಿದ್ಯಾರ್ಥಿಗಳಾದ ಸಮೀಕ್ಷಾ, ಸಾತ್ವಿಕ್, ಸ್ಪೂರ್ತಿ, ವೆಂಕಟೇಶ ನಿರೂಪಿಸಿದರು. ರೇವತಿ, ಶ್ರೇಯಾ ಸ್ವಾಗತಿಸಿದರು. ಅರ್ಜುನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net