

ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ನಡೆದುಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶ್ರೀ ವಾಡಿಕೊಡುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು ದಾಖಲೆಗಳನ್ನು ಪರಿಶೀಲಿಸಿ ವಾತನಾಡಿ, ಜಿಲ್ಲೆಯಲ್ಲಿ 3,238 ಕೆರೆಗಳಿದ್ದು ಅದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ 616 ಕೆರೆಗಳು ಇವೆ. ಈ ತಿಂಗಳಲ್ಲಿ ಈಗಾಗಲೇ 325 ಕೆರೆ ಅಳತೆ ಆಗಿದೆ. 175 ಕೆರೆಗಳ ಒತ್ತುವರಿಯನ್ನೂ ತೆರವುಗೊಳಿದ್ದಾರೆ. ಇನ್ನು 75 ಕೆರೆಗಳನ್ನು ಬೇರೆ ಕಾರಣಗಳಿಂದ ಉಳಿಸಿಕೊಂಡಿದ್ದಾರೆ. ಶುಕ್ರವಾರದೊಳಗೆ ಸಂಪೂರ್ಣ ಉಳಿದ 75 ಕೆರೆಗಳ ಒತ್ತುವರಿ ತೆರವುಗೊಳಿಸಲಾಗುತ್ತದೆ ಎಂದರು.
ಈಗಾಗಲೇ ಕೆರೆಗಳ ಸರ್ವೇ ಕಾರ್ಯನಡೆಯುತ್ತಿದ್ದು, ಸರ್ವೇ ವಾಡಿ ಒತ್ತುವರಿಯಾಗಿದ್ದರೆ ಗುರುತಿಸಿ, ಒತ್ತುವರಿ ತೆರವುಗೊಳಿಸುವುದು. ಒಂದು ವೇಳೆ ಆ ಕೆರೆ ಏನಾದರೂ ಜಿಪಂ ಅಧೀನದಲ್ಲಿದ್ದರೆ ಅದನ್ನು ಗ್ರಾಪಂ ಪಿಡಿಒ ಹಾಗೂ ನಮ್ಮ ಇಲಾಖಾಧಿಕಾರಿ ಸಮ್ಮುಖದಲ್ಲಿ ಸರ್ವೇ ವಾಡಿ ಒತ್ತವರಿಯಾಗಿದ್ದರೆ ಅದನ್ನ ಟ್ರಂಚ್ ಹೊಡಿಸಿ ಗ್ರಾಪಂ ಪಿಡಿಒ ಅವರಿಗೆ ಕೆರೆ ಒಪ್ಪಿಸುತ್ತಾರೆ ಎಂದು ತಿಳಿಸಿದರು.
ಕೆರೆಗಳು ಸಾರ್ವಜನಿಕರ ಸ್ವತ್ತು. ಇದನ್ನ ಎಲ್ಲರೂ ಕಾಪಾಡಬೇಕಾಗಿದೆ. ಸರ್ಕಾರ ಸ್ವತ್ತಿಗೆ ಯಾವುದೇ ಕಾರಣಕ್ಕೂ ನೋಟಿಸ್ ಕೊಡುವ ಅಗತ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಕೆರೆಯಂಗಳದಲ್ಲಿ ಫಸಲು ಬೆಳೆದಿದ್ದು, ಆ ಫಸಲು ಪೂರ್ತಿ ಬಂದಿದ್ದರೆ ರೈತರಿಗೆ ಸಮಯ ಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಫಸಲು ಮುಗಿದ ನಂತರ ಒತ್ತುವರಿ ತೆರವುಗೊಳಿಸಲು ಸೂಚಿಸಿದ್ದೇನೆ ಎಂದರು.
ಪಟ್ಟಣದ ಅವಾನಿಕೆರೆಯಂಗಳದಲ್ಲಿ ಸುವಾರು 200 ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೆರೆಯು ಅಳತೆ ಆಗಿದಿಯೋ ಇಲ್ಲವೋ ನನಗೆ ಇನ್ನು ವಾಹಿತಿ ಸಿಕ್ಕಿಲ್ಲ. ತಾಲೂಕಿನ ಇನ್ನುಳಿದ ಶೇ.50 ಕೆರೆಗಳು ಅಳತೆ ಆಗಬೇಕಾಗಿದೆ ಎಂದರು.
ತಾಲೂಕಿನ ಸಾರ್ವಜನಿಕರ ಅರ್ಜಿಗಳನ್ನು ಸಲ್ಲಿಸಿದಾಗ ಆ ಅರ್ಜಿಗಳನ್ನು ಪರಿಶೀಲಿಸಿ, ಕೆಲವೊಂದು ಸಮಸ್ಯೆಗಳಿಗೆ ತಹಸೀಲ್ದಾರ್‌ರೊಂದಿಗೆ ಚರ್ಚೆ ವಾಡಿದರು. ವಿವಿಧ ಇಲಾಖಾಧಿರಿಗಳೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಅತಿ ಶ್ರೀವಾಗಿ ಪರಿಹಾರ ವಾಡಿಕೊಡುವಂತೆ ನಿರ್ದೇಶನ ನೀಡಿದರು. ಕಳೆದ ತಿಂಗಳಲ್ಲಿ ಕೇತಗಾನಹಳ್ಳಿ ಬಳಿ ಅರಣ್ಯ ಒತ್ತವರಿ ಆಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ವೆಸಗೆದ್ದಾರೆಂದು ದೂರಿದಾಗ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಇದ್ದ ಅರಣ್ಯ ಅಧಿಕಾರಿ ಕೃಷ್ಣಮೂರ್ತಿಗೆ, ನೀವು ಸಾರ್ವಜನಿಕರ ಕೆಲಸ ವಾಡುತ್ತಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಎಂದು ಸೂಚಿಸಿದರು.
ನಾವು ಕಾನೂನಿಗೆ ಎಷ್ಟು ಗೌರವ ಕೊಟ್ಟರು ಸಹ ಅರಣ್ಯ ಅಧಿಕಾರಿಗಳು ಕಾನೂನು ಉಲ್ಲಂನೆ ವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಕಿಡಿಕಾರಿದರು. ಇದೇ ಸಮಯದಲ್ಲಿ ರಾಯಲ್ಪಾಡು ಗ್ರಾಮ ಸಹಾಯಕನನ್ನು ವಿಚಾರಿಸಿ ಕ್ರಮಕೈಗೊಳ್ಳವಂತೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ಸೂಚಿಸಿದರು.