ಕಣ್ಣುಗಳ ಬಗೆಗಿರಲಿ ಕಾಳಜಿ

28 RON 1 EYE CAMP
Published on

ರೋಣ: ನೇತ್ರಗಳು ಮಾನವನಿಗೆ ಪ್ರಪಂಚ ದರ್ಶಿಸುವ ಪ್ರಮುಖ ಅಂಗಗಳಾಗಿದ್ದು, ಕಣ್ಣುಗಳ ಸುರಕ್ಷತೆ ಮತ್ತು ಸಕಾಲಿಕ ಚಿಕಿತ್ಸೆ ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಅವುಗಳ ಬಗೆಗೆ ತೀವ್ರ ಕಾಳಜಿ ವಹಿಸಬೇಕು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಮಾತೋಶ್ರೀ ಬಸಮ್ಮ ತಾಯಿಯವರ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಸ್ಮರಣೋತ್ಸವ ಸಮಿತಿ ವತಿಯಿಂದ ಪಟ್ಟಣದ ರಾಜೀವಗಾಂಧಿ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಗಾಜಿನ ಬಿಂದು ಅಳವಡಿಕೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಮಾತನಾಡಿ, ಬಸಮ್ಮ ತಾಯಿಯವರು ಮಹಿಳಾ ಸಬಲೀಕರಣ ಮತ್ತು ಬಡ ಜನತೆಯ ಅನುಕೂಲಕ್ಕಾಗಿ ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಉತ್ತಮ ಕಾರ್ಯ ಕೈಗೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಅವರ ಸ್ಮರಣೋತ್ಸವದ ಅಂಗವಾಗಿ ಸೇವಾ ಸಮಿತಿ ಕೂಡ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಈ ಹಿಂದೆ ಚಿಕೂನ್ ಗುನ್ಯಾ, ಕರೊನಾ ಹರಡಿದ ಸಂದರ್ಭದಲ್ಲಿ ಸ್ಮರಣೋತ್ಸವ ಸಮಿತಿಯು ಜನರ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದೆ ಎಂದರು.

ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ವೈದ್ಯರಾದ ಕೆ.ಬಿ. ಧನ್ನೂರ, ಗಜಾನನ ಚನ್ನಶೆಟ್ಟಿ, ಆರ್.ಬಿ. ಮಲ್ಲಾಪುರ, ಎಲ್.ಡಿ. ಬಾಕಳೆ, ಮಧು ರೆಡ್ಡೇರ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಿದ್ದಣ್ಣ ಬಂಡಿ, ದಶರಥ ಗಾಣಿಗೇರ, ಬಸವರಾಜ ನವಲಗುಂದ, ವಿಶ್ವನಾಥ ಜಿಡ್ಡಿಬಾಗಿಲ, ಯೂಸುಫ್ ಇಟಗಿ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ವೀರಭದ್ರಗೌಡ ಪಾಟೀಲ, ಸ್ಮರಣೋತ್ಸವ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net