

ಜಮಖಂಡಿ: ಇಡಿ ವಿಶ್ವದಲ್ಲೆ ಭಾರತಿಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಅಪ್ಪಾಸಾಹೇಬ ವಿಠ್ಠಲ ಮಂದಿರದಲ್ಲಿ ಬುಧವಾರ ಪೂಜೆ ಸಲ್ಲಿಸುವುದರೊಂದಿಗೆ ಕ್ಷೇತ್ರಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಕ್ಷದ ಸಂಸ್ಥಾಪಕ ಡಾಕ್ಟರ್ ಶ್ಯಾಮಾಪ್ರಸಾದ ಮುಖರ್ಜಿ ಹಾಗೂ ಪಂಡಿತ ದೀನದಯಾಳ ಉಪಾಧ್ಯಾಯರ ಪರಿಶ್ರಮದಿಂದ ನೆಟ್ಟ ಮರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಪಕ್ಷವನ್ನು ಈ ಹಂತಕ್ಕೆ ಬೆಳೆದು ನಿಲ್ಲಲು ಸಾಕಷ್ಟು ಮಹಾನ ಪುರುಷರು ಶ್ರಮಿಸಿದ್ದು ಅವರ ಶ್ರಮವನ್ನು ಮರೆಯದೆ ಎಲ್ಲರೂ ಪಕ್ಷದ ಬೆಳವಣಿಗೆಗೆ ಕಟಿಬದ್ಧರಾಗಬೇಕಿದೆ ಎಂದರು.
ನಗರ ಹಾಗೂ ಗ್ರಾಮೀಣ ಮಂಡಲದ ಪ್ರತಿ ಗ್ರಾಮ ಹಾಗೂ ನಗರ ವಾರ್ಡ್‌ಗಳ ಬೂತ್‌ಮಟ್ಟದಲ್ಲಿ ಕನಿಷ್ಠ 400 ಸದಸ್ಯರನ್ನು ನೋಂದಾಯಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಬೂತ್‌ಮಟ್ಟದ ಪ್ರಮುಖರು ತಂಡ ರಚಿಸಿ ಸದಸ್ಯತ್ವದ ದೂ: 8800002024 ಗೆ ಮಿಸ್ ಕಾಲ್ ನೀಡುವ ಮೂಲಕ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸಕ್ರೀಯ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಹಾಗೂ ಈಗಾಗಲೇ ಸದಸ್ಯತ್ವ ಹೊಂದಿದವರು ತಮ್ಮ ಸದಸ್ಯತ್ವ ನವೀಕರಿಸಿಕೊಳ್ಳಬೇಕು ಎಂದರು.
ಸದೃಢ ಭಾರತ ಕಟ್ಟುವಲ್ಲಿ ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದ ಹಿತ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತ್ವ ಮಾಡಿಸಿದರು.
ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮಿಣ ಮಂಡಲ ಅಧ್ಯಕ್ಷ ಅರವಿಂದಗೌಡ ಪಾಟೀಲ, ಗಣೇಶ ಶಿರಗಣ್ಣವರ, ಡಾ.ರಾಕೇಶ ಲಾಡ, ಕಾಶಿನಾಥ ಚನವೀರ, ಗುರುಪಾದ ಮೆಂಡಿಗೇರಿ, ಕುಶಾಲ ವಾಗ್ಮೋರೆ, ರಾಜೇಸಾಬ ಕಡಕೋಳ, ರಮೇಶ ಆಲಬಾಳ, ರಾಜು ಚಿಕನಾಳ, ಶಂಕರ ಕಾಳೆ, ಸ್ವಾಗತ ಪಾಟೀಲ, ಶ್ರೀಶೈಲ ರಾಂಬಳಿ, ಶ್ರೀಶೈಲ ಗಡಾದ, ಸಾವಿತ್ರಿ ಗೊರನಾಳ, ದೀಪಕ ಕದಂ, ವಿನಾಯಕ ಗವಳಿ, ವಿನಾಯಕ ಪವಾರ ಇತರರಿದ್ದರು.