

ಸಿಂದಗಿ : ಮಾನವ ಜೀವನ ಪರೋಪಕಾರದಿಂದಲೇ ನಡೆಯಬೇಕು. ಇಂತಹ ಪರೋಪಕಾರ ಮನೋಭಾವ ಹೊಂದಿರುವ ಬಿರಾದಾರ ಕುಟುಂಬವು ಮುಕ್ತಿ ವಾಹನವನ್ನು ಸಮಾಜಕ್ಕೆ ಅರ್ಪಿಸಿ ಮಾದರಿ ಕಾರ್ಯ ಮಾಡಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಆಶೀರ್ವಾದ ಗ್ರೂಪ್ ವತಿಯಿಂದ ದಿ. ರವಿಗೌಡ ಬಿರಾದಾರರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಶನಿವಾರ ವಾಹನ ಹಸ್ತಾಂತರಿಸಿ ಮಾತನಾಡಿದ ಶ್ರೀಗಳು, ಪಟ್ಟಣ ಬೆಳೆಯುತ್ತಿದೆ. ಎಲ್ಲ ವರ್ಗದ ಜನರ ಅಂತಿಮ ಸಂಸ್ಕಾರಕ್ಕೆ ಮುಕ್ತಿ ವಾಹನ ಒದಗಿಸುವ ಮೂಲಕ ಪರೋಪಕಾರವನ್ನು ಸಮಾಜಕ್ಕೆ ಬಿತ್ತರಿಸಿದ್ದಾರೆ ಎಂದರು.
ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ನಿವೃತ್ತ ಶಿಕ್ಷಕ ಸಿದ್ದಪ್ಪ ಮಾಸ್ತರ ಬಿರಾದಾರ, ದಿ. ರವಿ ಬಿರಾದಾರ ಪತ್ನಿ ಲಕ್ಷ್ಮೀ, ಪುತ್ರ ಅಭಿಷೇಕ, ಅದ್ವಿತ್, ನಾಗರತ್ನ ಮನಗೂಳಿ ಉಪಸ್ಥಿತರಿದ್ದರು.