

ಚಿತ್ರದುರ್ಗ: ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತೇವೆಯೋ ಅದೇ ಉದ್ದೇಶಕ್ಕೆ ಬಳಸಿದರೆ ಅರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಿಸುತ್ತದೆ ಎಂದು ಪ್ರಭಾರ ಎಎಸ್‌ಪಿ ಉಮೇಶ್ ಈಶ್ವರನಾಯ್ಕ ಹೇಳಿದರು.
ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದಿಂದ ನಗರದ ಬರಗೇರಮ್ಮ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಆರ್ಥಿಕ ಸಾ ಕ್ಷರತಾ ಸಮಾಲೋಚನಾ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ,ಬ್ಯಾಂಕಿನಿಂದ ಸಾಲ ಪಡೆದರೆ ಅದನ್ನು ಸಕಾಲಕ್ಕೆ ಮರು ಪಾವತಿಸಿದರೆ,ಸಾಲ ಪಡೆ ದವರು ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು ಹಾಗೂ ಇದರಿಂದ ಬೇರೆಯವರು ಸಾಲವನ್ನು ಪಡೆಯಲು ಅನುಕೂಲವಾಗಲಿದೆ.
ಸಾಲಕ್ಕೆ ದಾಖಲಾತಿಗಳು ಸರಿ ಇರಬೇಕು, ಮರುಪಾವತಿಗೆ ಶಕ್ತರಾಗಿರಬೇಕೆಂಬ ಇತರೆ ನಿಯಮಗಳಿಗೆ ನಾವು ಬದ್ಧವಾಗಿರ ಬೇಕಿದೆ. ಇಷ್ಟು ಇದ್ದ ರೂ ಸಹಾ ಒಮ್ಮೊಮ್ಮೆ ಸಾಲ ಸಿಗುವುದು ಕಷ್ಟವಾಗುತ್ತದೆ. ಅನೇಕರು ತಾವು ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳದೆ ಮತ್ತೆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಕಡಿಮೆ ದಾಖಲಾತಿಗಳೊಂದಿಗೆ ಕಿರು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಶೀಘ್ರವಾಗಿ ಪಡೆೆಯ ಬಹುದು. ಆ್ಯಪ್ ಮೂಲಕ ಸಾಲ ಕೊಡುವು ದಾಗಿ ಜನರನ್ನು ವಂಚಿಸುವಂಥ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಎಚ್ಚರದಿಂದ ಇರಬೇಕು.ಲೋನ್‌ಆ್ಯಪ್‌ಗಳನ್ನು ನಂಬದೆ ನೇರವಾಗಿ ಸಾಲ ವನ್ನು ನೀಡುವವರ ಹತ್ತಿರ ಸಾಲವನ್ನು ಪಡೆಯಬೇಕಿದೆ ಎಂದರು.
ಲೀಡ್‌ಬ್ಯಾಂಕ್ ಮ್ಯಾನೇಜರ್ ಎಂ.ರಾಘವೇಂದ್ರ ಮಾತನಾಡಿ,ಲೀಡ್ ಬ್ಯಾಂಕ್ ಜಿಲ್ಲೆಯಲ್ಲಿ ನಡೆಯುವ ಹಣಕಾಸು ಸಂಸ್ಥೆಗಳ ಮೇಲುಸ್ತುವಾರಿ ನಡೆಸುತ್ತಿದೆ. ಗ್ರಾಹಕರಿಗೆ ಬ್ಯಾಂಕ್‌ನಲ್ಲಿ ಮೋಸವಾದರೆ ಅದರ ಪರಿಹಾರಕ್ಕೆ ನಮ್ಮ ಮಧ್ಯಸ್ಥಿಕೆ ಇದೆ. ಸಾಲ ಪಡೆದವರು ಕಿರುಕುಳ ಅನುಭವಿಸುತ್ತಿ ದ್ದರೆ ಆ ಬಗ್ಗೆಯೂ ಲೀಡ್ ಬ್ಯಾಂಕ್ ಕಾಳಜಿ ವಹಿಸಲಿದೆ.
ಎಲ್ಲ ಹಣಕಾಸು ಸಂಸ್ಥೆಗಳೂ ಆರ್‌ಬಿಐನ ನಿರ್ದೆಶನದಂತೆ ನಡೆಯುತ್ತದೆ. ಕಿರು ಹಣಕಾಸು ಸಂಸ್ಥೆಗಳು ಮನೆ ಬಾಗಿಲಿಗೆ ಬಂದು ದಾಖಲಾತಿ ಸಂ ಗ್ರಹಿಸಿ ಸಾಲ ವಿತರಿಸುತ್ತವೆ ಮತ್ತು ಸಾಲದ ಕಂತನ್ನು ಮನೆ ಬಾಗಿಲಲ್ಲೇ ಭರ್ತಿ ಮಾಡಬಹುದು ಎಂದರು.ರುಡ್‌ಸೆಟ್ ನಿರ್ದೇಶಕ ಬಸವರಾ ಜು,ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ಸಿಇಒ ವಿ.ಎನ್.ಹೆಗಡೆ ಮಾತನಾಡಿದರು. ತಿಪ್ಪೇಸ್ವಾಮಿ,ವೆಂಕಟೇಶ್,ಶಿವಲಿಂಗಯ್ಯ, ಮಂಜುನಾಥ್ ಭಾಗವಹಿಸಿದ್ದರು. ಸರೋಜಮ್ಮ ಪ್ರಾರ್ಥಿಸಿ,ಹೆಗಡೆ ಸ್ವಾಗತಿಸಿದರು ವಿರೇಶ್ ಕಾರ‌್ಯಕ್ರಮ ನಿರೂಪಿಸಿದರು.