ಜಂತುಹುಳು ನಿವಾರಣೆಯತ್ತ ಎಚ್ಚರಿಕೆ ವಹಿಸಿ

tdl 11-1
ತೇರದಾಳ ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನದ ಪ್ರಯುಕ್ತ ಅಲ್ಬೆಂಡೆರೊಲ್ ಮಾತ್ರೆಗಳನ್ನು ವಿತರಿಸಿ ಕೆ.ಎಸ್. ವಸದ ಮಾತನಾಡಿದರು. ಶಿಕ್ಷಕ ಬಿ.ಟಿ.ಪತ್ತಾರ ಇತರರಿದ್ದರು.
Published on

ತೇರದಾಳ: ಮಕ್ಕಳ ಆರೋಗ್ಯಕ್ಕಾಗಿ ಎಲ್ಲರೂ ಜಂತು ಹುಳುಗಳ ನಿವಾರಣೆಯತ್ತ ಎಚ್ಚರಿಕೆ ವಹಿಸಬೇಕೆಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಕೆ.ಎಸ್. ವಸದ ಹೇಳಿದರು.

ಪಟ್ಟಣದ ಸಿದ್ಧೇಶ್ವರ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನದ ಪ್ರಯುಕ್ತ ಅಲ್ಬೆಂಡೆಜೋಲ್ ಮಾತ್ರೆಗಳನ್ನು ವಿತರಿಸಿ ಅವರು ಮಾತನಾಡಿದರು.

ಬರಿಗಾಲಿನ ತಿರುಗಾಡುವುದರಿಂದ ಜಂತು ಹುಳುಗಳ ಮೊಟ್ಟೆಗಳು ದೇಹ ಸೇರುತ್ತವೆ. ಶೌಚದ ಬಳಿಕ ಹಾಗೂ ತಿಂಡಿ, ಊಟ ಸೇವನೆಯ ಮೊದಲು ಚೆನ್ನಾಗಿ ಕೈ ತೊಳೆಯಬೇಕು. ಇಲಾಖೆಯು ಉಚಿತವಾಗಿ ಕೊಡುವ ಮಾತ್ರೆಗಳನ್ನು ತಪ್ಪದೆ ನಿಯಮಾನುಸಾರ ತಿನ್ನುವ ಮೂಲಕ ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ಹೊರಗೆ ಹೋಗುವಂತೆ ಮಾಡಬೇಕು ಎಂದರು.

ಮುಖ್ಯಶಿಕ್ಷಕಿ ಬಿ.ಜಿ. ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ ಬಿ.ಟಿ. ಪತ್ತಾರ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಆರೋಗ್ಯ ಇಲಾಖೆಯ ಎಂ.ಜಿ. ಕಲ್ಯಾಣಿ, ಆಶಾ ಕಲಾರ್ಯಕರ್ತೆ ಭಾಗ್ಯಾ ಮೋಪಗಾರ, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net