ಬೀಜ, ಗೊಬ್ಬರ ಖರೀದಿಸುವಾಗ ಜಾಗ್ರತೆ ವಹಿಸಿ

Be careful when buying seeds and fertilizers.
ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ ಗ್ರಾಮದ ರೈತರಿಗೆ ನಕಲಿ ಬೀಜ, ಗೊಬ್ಬರ ಕುರಿತು ತಿಳಿ ಹೇಳುತ್ತಿರುವ ಕಷಿ ಅಧಿಕಾರಿ ಆನಂದ ಗೌಡರ.
Published on

ಗುಳೇದಗುಡ್ಡ: ಇತ್ತೀಚಿನ ದಿನಗಳಲ್ಲಿ ನಕಲಿ ಗೊಬ್ಬರ ಹಾವಳಿ ಹೆಚ್ಚಾಗಿದೆ. ನಕಲಿ ಡಿಎಪಿ, ಯೂರಿಯಾ ರಸಗೊಬ್ಬರಗಳನ್ನು ಸ್ಥಳೀಯ ಕಂಪನಿಗಳು ಬೇರೆ ಬೇರೆ ಹೆಸರಿನಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದು, ರೈತರು ಜಾಗ್ರತೆ ವಹಿಸಬೇಕು ಎಂದು ತಾಲೂಕು ಕಷಿ ಅಧಿಕಾರಿ ಆನಂದ ಗೌಡರ ಹೇಳಿದರು.

ತಾಲೂಕಿನ ಮಂಗಳಗುಡ್ಡ, ಚಿಮ್ಮಲಗಿ, ಕಾಟಾಪುರ ಗ್ರಾಮಗಳ ರೈತರನ್ನು ಸೋಮವಾರ ಭೇಟಿ ಮಾಡಿ ಮತ್ತು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಅಧಿಕತ ಕಂಪನಿಗಳಿಂದ ಬೀಜ ಮತ್ತು ಗೊಬ್ಬರಗಳನ್ನು ಖರೀದಿಸಿ ಬಿಲ್ ಪಡೆಯಬೇಕು. ರೈತರು ಡಿಎಪಿ, ಯೂರಿಯಾ, ಪೊಟ್ಯಾಷ್ ಮಾತ್ರ ಬೆಳೆಗೆ ಅವಶ್ಯಕ ಎಂದು ತಿಳಿದಿರುತ್ತಾರೆ. ಆದರೆ ಈ ಗೊಬ್ಬರಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಮೂರು ಸಿಗುವುದಿಲ್ಲ. ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಿದರೆ ಬೆಳೆಗಳಿಗೆ ಅನುಕೂಲ ಎಂದು ಹೇಳಿದರು.

ಪರ್ಟಿಲೈಜರ್ಸ್ ಅಂಗಡಿಗಳಿಗೆ ನೋಟಿಸ್

ಪಟ್ಟಣದಲ್ಲಿ ರಸಗೊಬ್ಬರ ಅಂಗಡಿಗಳಿಗೆ ಕಷಿ ಅಧಿಕಾರಿ ಆನಂದ ಗೌಡರ ಭೇಟಿ ನೀಡಿ ಪರಿಶೀಲಿಸಿದರು. ನಕಲಿ ಬೀಜ, ಗೊಬ್ಬರಗಳನ್ನು ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net