ಬಿಸಿಯೂಟ ಸಿದ್ಧತೆಯಲ್ಲಿ ಇರಲಿ ಎಚ್ಚರ

RAVISHANKARAREDDY ddpi (2)
Published on

ಪರಶುರಾಮಪುರ: ಚಳ್ಳಕೆರೆ ತಾಲೂಕು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಈಗಾಗಲೇ ಬಿಸಿಯೂಟ ಆರಂಭಿಸಿದ್ದು, ಈ ವೇಳೆ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರರೆಡ್ಡಿ ಸೂಚನೆ ನೀಡಿದ್ದಾರೆ.

ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುವ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುವಲ್ಲಿ ಲೋಪ ಆಗಬಾರದು ಎಂದಿದ್ದಾರೆ.

ಪ್ರತೀ ದಿನವೂ ಅಡುಗೆ ಕೋಣೆ ಸ್ವಚ್ಛಗೊಳಿಸಬೇಕು. ಆಹಾರ ಧಾನ್ಯಗಳು, ತರಕಾರಿಯನ್ನು ಶುದ್ಧ ನೀರಿನಿಂದ ತೊಳೆದು ಅಡುಗೆ ಸಿದ್ಧಪಡಿಸಬೇಕು. ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆಗೆ ಗಮನಹರಿಸಬೇಕು. ಅಡುಗೆ ಕೊಣೆಯೊಳಗೆ ಮಕ್ಕಳು ಪ್ರವೇಶಸದಂತೆ ನೋಡಿಕೊಳ್ಳಬೇಕು. ಹುಳು, ಹಲ್ಲಿ, ಕಸ ಪಾತ್ರೆಗಳಲ್ಲಿ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಇವುಗಳನ್ನು ಉಲ್ಲಂಘಿಸಿದರೆ, ಯಾವುದೇ ರೀತಿ ಅನಾಹುತ ಸಂಭವಿಸಿದರೆ ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net