ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಿ

18 HBH 01
ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದಲ್ಲಿ ತಹಸೀಲ್ದಾರ್ ಆರ್.ಕವಿತಾ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಟಿಎಚ್‌ಒ ಡಾ.ಪ್ರವೀಣ, ವೈದ್ಯಾಧಿಕಾರಿ ಎಚ್.ರಾಜೇಂದ್ರ, ಬಿಇಒ ಮೈಲೇಶ ಬೇವೂರು, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಆನಂದ್ ಡೊಳ್ಳಿನ್. ಪಿಐ ವಿಕಾಸ್ ಪಿ.ಲಮಾಣಿ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದೆ. ತಾಲೂಕಿನ ನದಿಪಾತ್ರದ ನಿವಾಸಿಗಳು ಜಾಗೃತರಾಗಿರಬೇಕು ಎಂದು ತಹಸೀಲ್ದಾರ್ ಆರ್.ಕವಿತಾ ಹೇಳಿದರು.

ತಾಲೂಕಿನ ಕಿತ್ನೂರು ಮತ್ತು ಮುತ್ಕೂರು ಗ್ರಾಮಗಳಿಗೆ ಸೋಮವಾರ ಸಂಜೆ ಭೇಟಿ ನೀಡಿ ಮಾತನಾಡಿದರು. ನದಿಪಾತ್ರದ ಗ್ರಾಮಗಳ ಜನರಿಗೆ ಗ್ರಾಪಂ ಅಧಿಕಾರಿಗಳು ಡಂಗುರ ಬಾರಿಸುವ ಮೂಲಕ ಮುಂಜಾಗ್ರತಾ ಕ್ರಮಗಳಿಗೆ ಸೂಚಿಸಬೇಕು. ಜಾನುವಾರುಗಳನ್ನು ಮೇಯಿಸಲು ಮತ್ತು ನೀರು ಕುಡಿಸಲು ನದಿಯತ್ತ ಹೋಗಬಾರದು. ಜನ-ಜಾನುವಾರುಗಳಿಗೆ ಆಗುವ ಜೀವಹಾನಿಗಳ ಬಗ್ಗೆ ಮಾಹಿತಿ ಕೂಡಲೇ ನೀಡಬೇಕು.

ಆರೋಗ್ಯ ಇಲಾಖೆ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.

ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಪಿಡಬ್ಲ್ಯುಡಿ ಎಇಇ ಸತೀಶ್ ನಾಯ್ಕ, ಸಿಡಿಪಿಒ ಬೋರೇಗೌಡ, ಪುರಸಭೆ ಕಂದಾಯ ಅಧಿಕಾರಿ ಮಾರೆಣ್ಣ , ಕಂದಾಯ ನಿರೀಕ್ಷಕ ಸಾಲ್ವನಿ ಕೊಟ್ರೇಶ, ಗ್ರಾಮ ಆಡಳಿತಾಧಿಕಾರಿ ಚನ್ನಬಸಪ್ಪ, ಸಹಾಯಕ ಟಿ.ಪಕ್ಕೀರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net