ಕುಷ್ಠರೋಗ ಹರಡದಂತೆ ಎಚ್ಚರಿಕೆವಹಿಸಿ

dvd leprosy
ದೇವದುರ್ಗದ ಯಲ್ಲಾಲಿಂಗ ಕಾಲನಿಯಲ್ಲಿ ಕುಷ್ಠರೋಗ ಜಾಗೃತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಚೇರಿ ಡಿಎಲ್‌ಸಿ ಡಾ.ಶಿಲ್ಪಾ ರಾಯಚೂರು, ನೌಕರರಾದ ಶಿವಪ್ಪ ಭೂಮನಗುಂಡ, ಭಾನು, ರಾಜು, ಚನ್ನಬಸಯ್ಯ ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸೋಮಪ್ಪ, ರಾಜೇಶ್ವರಿ ಇದ್ದರು.
Published on

ದೇವದುರ್ಗ: ಕುಷ್ಠರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಜನರು ಜಾಗೃತಿವಹಿಸಬೇಕಿದೆ. ವೈದ್ಯರು ನೀಡುವ ಸಲಹೆ ಪಾಲಿಸಿದರೆ ರೋಗದಿಂದ ಗುಣಮುಖರಾಗಬಹುದು ಎಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಯಲ್ಲಾಲಿಂಗ ಕಾಲನಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕುಷ್ಠರೋಗ ಪಿಒಡಿ ಕ್ಯಾಂಪ್ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಕುಷ್ಠರೋಗವನ್ನು 1873ರಲ್ಲಿ ಡಾ.ಹೆನ್ಸನ್ ಎಂಬ ವಿಜ್ಞಾನಿ ಕಂಡುಹಿಡಿದರು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಹರಡುತ್ತದೆ. ದೇಹದ ಯಾವುದೇ ಭಾಗದ ಮೇಲೆ ತಿಳಿಬಿಳಿ ತಾಮ್ರ ಬಣ್ಣದ ಮಚ್ಚೆಗಳು, ಸ್ಪರ್ಶಜ್ಞಾನ ಇಲ್ಲದಿರುವ ಲಕ್ಷಣಗಳು ಕಂಡು ಬಂದಲ್ಲಿ ಭಯ ಪಡದೆ ತಪಾಸಣೆಗೆ ಒಳಗಾಗಬೇಕು. ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರು ಎಚ್ಚರಿಕೆವಹಿಸಬೇಕು. ಬಿಸಿನೀರು, ಪೌಷ್ಟಿಕ ಆಹಾರ ಸೇವನೆ ಜತೆಗೆ ಮನೆಯ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತೆಯಿಂದ ರೋಗಗಳು ದೂರವಾಗಲಿವೆ ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಚೇರಿ ಡಿಎಲ್‌ಸಿ ಡಾ.ಶಿಲ್ಪಾ ರಾಯಚೂರು ಮಾತನಾಡಿದರು. ನಂತರ ಕಾಲನಿ ಜನರ ಆರೋಗ್ಯ ತಪಾಸಣೆ ಮಾಡಿ ಔಷಧ, ಎಂಸಿಆರ್ ಚಪ್ಪಲಿ ಒಳಗೊಂಡ ಕಿಟ್ ನೀಡಲಾಯಿತು. ಆರೋಗ್ಯ ಇಲಾಖೆ ನೌಕರರಾದ ಶಿವಪ್ಪ ಭೂಮನಗುಂಡ, ಭಾನು, ರಾಜು, ಚನ್ನಬಸಯ್ಯ ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸೋಮಪ್ಪ, ರಾಜೇಶ್ವರಿ, ಚಂದ್ರಪ್ಪ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net