

ಕಾರವಾರ: ನಿಮ್ಮ ಅಪ್ರಾಪ್ತ ಮಕ್ಕಳಿಗೆ ಬೈಕ್ ಅಥವಾ ಕಾರನ್ನು ಚಾಲನೆ ಮಾಡಲು ನೀಡುವ ಮೊದಲು ಎಚ್ಚರ. ಅಪಘಾತ ಸಂಭವಿಸುವ ಆತಂಕ ಒಂದಾದರೆ, ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾದೀತು. ಹೊಸ ಬೈಕ್ ಅಥವಾ ಕಾರು ಖರೀದಿಸಿದಷ್ಟು ದಂಡ ತೆರುವ ಅಪಾಯವೂ ಇದೆ. ಅಂಥ ಘಟನೆಯೊಂದು ಕಾರವಾರದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಕೊಟ್ಟ ಮಾಲೀಕನಿಗೆ ಸಿಜೆಎಂ ನ್ಯಾಯಾಲಯ 30 ಸಾವಿರ ದಂಡ ವಿಧಿಸಿದೆ. ನಗರದ ಮುರಳೀಧರಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪಘಾತ ಸಂಭವಿಸಿದ ಬಗ್ಗೆ ಆರೋಪಿ ಅಪ್ರಾಪ್ತ ಬಾಲಕನಾಗಿದ್ದ. ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಹಸ್ತಾಂತರಿಸಲಾಗಿತ್ತು.
ಬಾಲ ನ್ಯಾಯ ಮಂಡಳಿಯು ಅಪ್ರಾಪ್ತನಿಗೆ 6,500 ರೂ. ದಂಡ ವಿಧಿಸಿದೆ. ವಾಹನ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರ ಸ್ಕೂಟರಿನ ಮಾಲೀಕರಿಗೆ 30,000 ರೂಗಳನ್ನು ದಂಡ ವಿಧಿಸಿದೆ.
ಇದನ್ನೂ ಓದಿ: ಸಂಸದ ಅನಂತಕುಮಾರ ಹೆಗಡೆ ಮನೆಗೆ ಮುತ್ತಿಗೆ