ಆನ್‌ಲೈನ್ ವಂಚಕರಿಂದ ಜಾಗೃತವಾಗಿರಿ

20 HDLP 01
ಸಾರ್ವಜನಿಕರು ಕಳೆದುಕೊಂಡು ಮೊಬೈಲ್‌ಪೋನ್‌ಗಳನ್ನು ಹೂವಿನಹಡಗಲಿ ಠಾಣೆಯಲ್ಲಿ ಮರಳಿ ವಾರಸುದಾರರಿಗೆ ವಿತರಿಸಲಾಯಿತು. ಡಿವೈಎಸ್ಪಿ ವೆಂಕಟಪ್ಪನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐ ವಿಜಯಕೃಷ್ಣ ಇತರರಿದ್ದರು.
Published on

ಹೂವಿನಹಡಗಲಿ: ಅಪರಿಚಿತರು ನಿಮ್ಮ ಬ್ಯಾಂಕ್‌ಖಾತೆಯ ಮಾಹಿತಿ ಕೇಳಿದರೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಡಿವೈಎಸ್ಪಿ ವೆಂಕಟಪ್ಪನಾಯಕ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಾರ್ವಜನಿಕರು ಕಳೆದುಕೊಂಡು ಮೊಬೈಲ್‌ಗಳನ್ನು ವಾರಸುದಾರರಿಗೆ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಖಾತೆಯ ಮೂಲಕ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಪರಿಚಿತರು ತಮಗೆ ಕರೆ ಮಾಡಿದಾಗ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರು ಮೊಬೈಲ್ ೆನ್‌ಗಳನ್ನು ದೋಚಲು ಹವಣಿಸುತ್ತಿರುತ್ತಾರೆ. ಈ ವೇಳೆ ಮೊಬೈಲ್‌ಪೋನ್‌ಗಳನ್ನು ಜಾಗೃತೆಯಿಂದ ಇಟ್ಟುಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಲ್ಲಿ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಸಿಪಿಐ ದೀಪಕ್ ಬೂಸರೆಡ್ಡಿ ಮಾತನಾಡಿ, ಠಾಣೆಯಲ್ಲಿ ಸುಮಾರು 24 ಮೊಬೈಲ್‌ಪೋನ್‌ಗಳನ್ನು ಮರಳಿ ವಾರಸುದಾರರಿಗೆ ನೀಡಲಾಗಿದೆ. ಕಳ್ಳತನ ಹಾಗೂ ಇತರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net