ಆನ್‌ಲೈನ್ ಮೋಸದ ಅರಿವಿರಲಿ

FotoJet 22 1
Published on

ಹುಳಿಯಾರು:ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುವ ಜಾಲ ವ್ಯಾಪಕವಾಗಿ ಬೆಳೆದಿದೆ ಎಂದು ಹುಳಿಯಾರು ಪೊಲೀಸ್ ಠಾಣೆಯ ಉಪನಿರೀಕ್ಷಕ ಧರ್ಮಾಂಜಿ ಹೇಳಿದರು.

ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಆನ್‌ಲೈನ್ ಮೋಸದ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ವಸಂತ ಮಾತನಾಡಿ, ಆರೋಗ್ಯ ಇಲಾಖೆಯ ಅಭಿಯಾನದ ತಿಳಿಸಿದ ಅವರು, ಸೆ.17ರಿಂದ ಅ.2 ರವರೆಗೆ ಗ್ರಾಮದ ಎಲ್ಲ ಮಹಿಳೆಯರಿಗೆ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣೆ ನಡೆಸಲಾಗುವುದು. ಈ ತಪಾಸಣೆಗಳಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ರಕ್ತದೊತ್ತಡ, ಮಧುಮೇಹ, ದಂತ ಪರೀಕ್ಷೆ, ಕ್ಯಾನ್ಸರ್, ಗರ್ಭಿಣಿಯರಿಗೆ ಸಿಗುವ ಸೌಲಭ್ಯಗಳು, ರಕ್ತಹೀನತೆ ಮತ್ತು ಕ್ಷಯರೋಗ ಪರೀಕ್ಷೆ ಮಾಡಿಸಬಹುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ರೇಣುಕರಾಜ್ ಮಾತನಾಡಿ, ಹಾವು ಕಡಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಾಲ್ಯವಿವಾಹದ ದುಷ್ಪರಿಣಾಮ ಮತ್ತು ಅದರ ಕಾನೂನು ಶಿಕ್ಷೆಗಳ ಬಗ್ಗೆಯೂ ವಿವರಿಸಿದರು. ತಮ್ಮ ಸುತ್ತಮುತ್ತ ಬಾಲ್ಯವಿವಾಹ ನಡೆಯುತ್ತಿದ್ದರೆ ತಕ್ಷಣವೇ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಡಿ.ಆರ್.ಶಿವಲಿಂಗೇಗೌಡ ಮಾತನಾಡಿ, 27 ವರ್ಷಗಳಿಂದ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಸಂಸ್ಥೆಯು ಸಾರ್ವಜನಿಕರಿಗೆ ಸಾಲ ಸೌಲಭ್ಯ ಒದಗಿಸುವುದರ ತೆಗೆ ಆರೋಗ್ಯ, ಆರ್ಥಿಕ ಮತ್ತು ಇತರ ವಿಷಯಗಳ ಬಗ್ಗೆ ಜ್ಞಾನ ನೀಡಿ ಉತ್ತಮ ಜೀವನ ನಿರ್ಮಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ನ ಹುಳಿಯಾರು ಶಾಖೆಯ ವ್ಯವಸ್ಥಾಪಕ ಕುಮಾರ್, ಸಂಸ್ಥೆಯ ಸದಸ್ಯರು ಹಾಗೂ ಹುಳಿಯಾರು ಶಾಖೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net