ಬಾಲ್ಯ ವಿವಾಹ, ಅತ್ಯಾಚಾರ ತಡೆಗಿರುವ ಕಾನೂನಿನ ಅರಿವಿರಲಿ

28 hnd-2
ಹುನಗುಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಆರ್.ಟಿ.ಇ ಕುರಿತು ಅರಿವು ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಉದ್ಘಾಟಿಸಿದರು. ಪ್ರಾಚಾರ್ಯ ಶರಣಪ್ಪ ಹೂಲಗೇರಿ, ಗ್ರೇಡ್-2 ತಹಸೀಲಾರ್ ಮಹೇಶ ಸಂದಿಗವಾಡ ಇದ್ದರು.
Published on

ಹುನಗುಂದ: ಬಾಲ್ಯ ವಿವಾಹ ಮತ್ತು ಮಹಿಳಾ ಅತ್ಯಾಚಾರ ತಡೆಗಿರುವ ಕಾನೂನುಗಳ ಸೂಕ್ತ ಅರಿವು ಸಮಾಜಕ್ಕೆ ಇರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಶೇಖರಗೌಡ ರಾಮತ್ನಾಳ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಗುರುವಾರ ನಡೆದ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಆರ್‌ಟಿಇ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನು ಮತ್ತು ಸೌಲಭ್ಯಗಳಿವೆ. ಪಾಲಕರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಸಾಮಾಜಿಕ ಅವಘಡಗಳನ್ನು ತಪ್ಪಿಸಲು ಸಾಂಕ ಪ್ರಯತ್ನ ನಡೆಯಬೇಕು. ಇಂದಿನ ಯುವ ಜನಾಂಗ ಸಾಮಾಜಿಕ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ವಿವಿಧ ಮೋಹಗಳಿಗೆ ಆಕರ್ಷಿತರಾಗದೆ ಬದುಕಿನ ಗಂಭೀರ ಚಿಂತನೆಗೆ ಮುಂದಾಗಬೇಕು ಎಂದರು.

ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಸಮಾಜದ ಸಹಕಾರ ಅಗತ್ಯ ಎಂದರು.

ಮುಖ್ಯಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿದರು.

ಬಾಗಲಕೋಟೆ ಸಖಿ ಒನ್ ಸ್ಟಾಫ್ ಆಡಳಿತಾಧಿಕಾರಿ ಶಂಕ್ರಮ್ಮ ಜಮ್ಮನಕಟ್ಟಿ ಬಾಲ್ಯವಿವಾಹ ನಿಷೇಧ ಮತ್ತು ಆರ್.ಟಿ.ಇ. ಕಾಯಿದೆ ಹಾಗೂ ಸಖಿ ಒನ್ ಸ್ಟಾಫ್ ಕಾನೂನು ಸಲಹೆಗಾರ ವಿಶಾಲ ಎಚ್.ಜಿ. ಪೋಕ್ಸೋ ಕಾಯಿದೆ 2012 ಕುರಿತು ಉಪನ್ಯಾಸ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಂಗಲಾ ಹಿರೇಮನಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ವಿಜಯಲಕ್ಷ್ಮೀ ಹಿರೇಮಠ, ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಶಿವಲೀಲಾ ಸರಗಣಾಚಾರಿ, ಎಎಸ್ ಐ ಸಿ.ಟಿ. ರಂಗಾಪುರ ಇತರರಿದ್ದರು.

ಶಾರದಾ ಭಜಂತ್ರಿ ಸ್ವಾಗತಿಸಿದರು. ಐ.ಎಚ್.ನಾಯಿಕ ನಿರೂಪಿಸಿದರು. ಶರಣಪ್ಪ ಹೂಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net