

ನರಗುಂದ: ಪಟ್ಟಣದ ಅಧ್ಯಾಪಕನಗರ ಬಡಾವಣೆಯ ಶ್ರೀಹನುಮಂತ ದೇವರ ಕಲ್ಯಾಣ ಮಂಟಪದಲ್ಲಿ ಸಂತ್ರಸ್ತ ಠೇವಣಿದಾರರ ಪರಿವಾರ (ಟಿಪಿಜೆಪಿ) ಸಭೆ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಬುಗಡೆ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿರುವ ಹಲವಾರು ಕಂಪನಿಗಳು ಹಣ ದ್ವಿಗುಣಗೊಳಿಸುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿವೆ. ಇಂಥ ವಂಚನೆಗಳ ಬಗ್ಗೆ ಜನರು ಜಾಗೃತರಾಗಿರಬೇಕು. ಬಡ್ಸ್ ಕಾಯ್ದೆ ಪ್ರಕಾರ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಹೋರಾಟದಿಂದ ಮಾತ್ರ ಗ್ರಾಹಕರಿಗೆ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು. ಟಿಪಿಜೆಪಿ ಜಿಲ್ಲಾಧ್ಯಕ್ಷ ಹೇಮಂತಗೌಡ ಮಾಲಿಪಾಟೀಲ, ತಾಲೂಕಾಧ್ಯಕ್ಷ ಲಾಲಸಾಬ್ ನದಾಫ, ಪ್ರಕಾಶ ಡಂಬಳ, ಪಿ.ಟಿ. ಸೂರ್ಯವಂಶಿ, ನೀಲಮ್ಮ ಗಡಕೇರಿ, ಸರೋಜಾ ಬಾರಕೇರ, ಚನ್ನಮ್ಮ ಕರ್ಜಗಿ, ಪಂಚಯ್ಯ ವಿರಕ್ತಮಠ, ಇತರರಿದ್ದರು.