ಡಿಜಿಟಲ್ ಮೋಸದ ಅರಿವಿರಲಿ

FotoJet 211
Published on

ಶಿರಾ: ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ ವಿಭಾಗ ಹಾಗೂ ಐಕ್ಯೂಎಸಿ ಇವರ ಸಹಯೋಗದಲ್ಲಿ ಶುಕ್ರವಾರ ಡಿಜಿಟಲ್ ಬ್ಯಾಂಕಿಂಗ್ ಕುರಿತು ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಆರ್ಥಿಕ ಸೇರ್ಪಡೆ ಅಭಿವೃದ್ಧಿ ವಿಭಾಗದ ಸಹಾಯಕ ಜನರಲ್ ವ್ಯಾನೇಜರ್ ಪ್ರಭಾಕರನ್ ವಾತನಾಡಿ, ಗ್ರಾಹಕರು ಬ್ಯಾಂಕಿನ ಮಹತ್ವ ತಿಳಿಯಬೇಕು. ಪ್ರತಿಯೊಬ್ಬರೂ ಡಿಜಿಟಲ್ ಬ್ಯಾಂಕಿಂಗ್ ಆಯಾಮದಲ್ಲಿ ನಡೆಯುವ ಬ್ಯಾಂಕಿಂಗ್ ಮೋಸದ ಬಗ್ಗೆ ಜಾಗರೂಕರಾಗಿರಬೇಕು ಸಲಹೆ ನೀಡಿದರು.

ತುಮಕೂರಿನ ಲೀಡ್ ಡಿಸ್ಟ್ರಿಕ್ಟ್ ವ್ಯಾನೇಜರ್ ಚೈತನ್ಯ ಕಂಚಿ ಬೈಲ್ ವಾತನಾಡಿ, ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬೇಕು, ಎಲ್ಲರು ಹಣವನ್ನು ಉಳಿತಾಯ ವಾಡುವ ಮೂಲಕ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು ತಿಳಿಸಿ, ಹಲವಾರು ರೀತಿಯ ಬ್ಯಾಂಕಿಂಗ್ ಸೌಲಭ್ಯ ಕುರಿತು ವಾಹಿತಿ ನೀಡಿದರು.

ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥೆ ಡಾ.ನೂರ್ ಆಯಿಷಾ ವಾತಾನಾಡಿದರು. ಪ್ರಾಂಶುಪಾಲ ಪ್ರೊ.ಚಂದ್ರಶೇಖರಪ್ಪ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ.ವಿಜಯ್ ಕುವಾರ್, ನಿರ್ವಹಣಾ ಶಾಸ ವಿಭಾಗದ ಮುಖ್ಯಸ್ಥ ನಾಗರಾಜು, ಐಕ್ಯೂಎಸಿ ಸಂಚಾಲಕ ಪ್ರಭಾಸ್ ಪಂಡಿತ್, ಡಾ.ಎನ್.ಡಿ.ನಳಿನಿ ಹಾಗೂ ಎ.ಎಲ್.ವನಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net