ಮಾರಣಾಂತಿಕ ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ

ಶ್ರೀರಂಗಪಟ್ಟಣದಲ್ಲಿ ಜನಜಾಗೃತಿ ಆಂದೋಲನಕ್ಕೆ ಡಾ.ಸವಿತಾ ಚಾಲನೆ ನೀಡಿದರು. ಎಸ್.ಟಿ.ಬೆನ್ನೂರ್, ಡಾ.ಶಿವರಾಮ ಶಾಸ್ತ್ರಿ, ಎ.ಜಿ.ಮಿಲನಾ, ಮೇಘನಾ, ಬಿ.ಹೇಮಣ್ಣ ಇತರರಿದ್ದರು.
ಶ್ರೀರಂಗಪಟ್ಟಣದಲ್ಲಿ ಜನಜಾಗೃತಿ ಆಂದೋಲನಕ್ಕೆ ಡಾ.ಸವಿತಾ ಚಾಲನೆ ನೀಡಿದರು. ಎಸ್.ಟಿ.ಬೆನ್ನೂರ್, ಡಾ.ಶಿವರಾಮ ಶಾಸ್ತ್ರಿ, ಎ.ಜಿ.ಮಿಲನಾ, ಮೇಘನಾ, ಬಿ.ಹೇಮಣ್ಣ ಇತರರಿದ್ದರು.
Published on

ಶ್ರೀರಂಗಪಟ್ಟಣ: ಮಾರಣಾಂತಿಕ ಕಾಯಿಲೆಗಳ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಸ್ತ್ರೀರೋಗ ತಜ್ಞೆ ಡಾ.ಸವಿತಾ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧನ ಘಟಕ, ತಾಲೂಕು ಆರೋಗ್ಯ ಇಲಾಖೆಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಡ್ಸ್ ಸೇರಿದಂತೆ ಹಲವಾರು ಕಾಯಿಲೆಗಳು ಜನರನ್ನು ಬಾಧಿಸುತ್ತಿರುವೆ. ಈ ಬಗ್ಗೆ ಜನತೆ ಕಾಳಜಿ ವಹಿಸುತ್ತಿಲ್ಲ. ಜತೆಗೆ ಸರಿಯಾದ ಮಾಹಿತಿಯನ್ನೂ ಪಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಬೆನ್ನೂರ್ ಮಾತನಾಡಿ, ಜನರಲ್ಲಿರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಲು, ಸುರಕ್ಷಿತ ನಡವಳಿಕೆಗಳ ಬಗ್ಗೆ ಶಿಕ್ಷಣ ನೀಡಲು ಬೀದಿ ನಾಟಕಗಳು ಸಹಕಾರಿ ಎಂದರು.

ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಶಿವಗಂಗಾ ಸಾಂಸ್ಕೃತಿಕ ಕಲಾತಂಡ ಪಟ್ಟಣದ ನಗರ ಬಸ್ ನಿಲ್ದಾಣ ಸೇರಿದಂತೆ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಅರಿವು ಮೂಡಿಸುತ್ತಿದೆ ಎಂದ ಅವರು, ತಾಲೂಕಿನ ಮಹಾದೇವಪುರ ಬೆಳಗೋಳ, ಕೆಆರ್‌ಎಸ್, ಕೆ.ಶೆಟ್ಟಿಹಳ್ಳಿ, ಕೊಡಿಯಲ, ಅರಕೆರೆ, ನಗುನಳ್ಳಿ, ಟಿ.ಎಂ.ಹೊಸೂರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ತಜ್ಞ ವೈದ್ಯ ಡಾ. ಶಿವರಾಮ ಶಾಸ್ತ್ರಿ, ಐಸಿಟಿಸಿ ಆಪ್ತ ಸಮಾಲೋಚಕಿ ಎ.ಜಿ.ಮಿಲನಾ, ಸಾಂಕ್ರಾಮಿಕ ರೋಗ ತಜ್ಞೆ ಮೇಘನಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ, ಶಿವಗಂಗಾ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ಸಂತೆ ಕಸಲಗೆರೆ ಬಸವರಾಜು, ಎಸ್.ರಾಜಣ್ಣ, ದೇವರಾಜು, ಎಸ್.ಪಿ.ಬಸವರಾಜು, ಎಸ್.ಕೆ. ಶಿವರಾಜ್, ನವೀನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net