ಸೈಬರ್ ಕ್ರೈಂ ಬಗ್ಗೆ ಜಾಗೃತಿ ವಹಿಸಿ

Be aware of cybercrime.
ಮಹಾಲಿಂಗಪುರ ಕೆಎಲ್‌ಇ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸಂಗೀತಾ ತೇಲಿ ಅವರಿಗೆ ಬಹುಮಾನ ವಿತರಿಸಲಾಯಿತು. ಠಾಣಾಧಿಕಾರಿ ಕಿರಣ ಸತ್ತಿಗೇರಿ, ಪಿಎಸ್‌ಐ ಮಧು ಎಲ್, ಡಾ.ಸುನಂದಾ ಸೊರಗಾಂವಿ ಇದ್ದಾರೆ.
Published on

ಮಹಾಲಿಂಗಪುರ: ವಿದ್ಯಾರ್ಥಿಗಳು ಸೈಬರ್ ಕ್ರೈಂ ಬಗ್ಗೆ ಜಾಗೃತಿ ವಹಿಸುವ ಮೂಲಕ ತಮ್ಮ ಮಾನ, ಹಣ ಉಳಿಸಿಕೊಳ್ಳಬೇಕು ಹಾಗೂ ಡ್ರಗ್ಸ್‌ನಿಂದ ದೂರವಿದ್ದು ಸುಂದರ ಜೀವನ ರೂಪಿಸಿಕೊಳ್ಲಬೇಕು ಎಂದು ಠಾಣಾಧಿಕಾರಿ ಕಿರಣ ಸತ್ತಿಗೇರಿ ಹೇಳಿದರು.

ಸ್ಥಳೀಯ ಕೆಎಲ್‌ಇ ಪದವಿ ಕಾಲೇಜಿನಲ್ಲಿ ರಾಜ್ಯಶಾಸ ವಿಭಾಗ ಮತ್ತು ಪೊಲೀಸ್ ಠಾಣೆ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ ಹೊಸ ಅಪರಾಧ ಕಾಯ್ದೆ ಬಗ್ಗೆ ಅರಿವು, ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪರಾಧ ವಿಭಾಗದ ಪಿಎಸ್‌ಐ ಮಧು ಎಲ್. ಮಾತನಾಡಿ, ಮಾರ್ಪಾಡಾದ ಅಪರಾಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಪದವಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ.ಸುನಂದಾ ಸೊರಗಾಂವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೊಲೀಸರೊಂದಿಗೆ ವಿದ್ಯಾರ್ಥಿಗಳ ಸಂವಾದ ನಡೆಸಿದರು. ಸಂವಿಧಾನದ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 146 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತಾ ತೇಲಿ ಪ್ರಥಮ, ದಾನಮ್ಮ ಪೂಜಾರಿ ದ್ವೀತಿಯ, ಸ್ವಾತಿ ಪಾಲಬಾವಿ ಮತ್ತು ಪ್ರಿಯಾಂಕ ಕಾಂಬಳೆ ತೃತೀಯ ಸ್ಥಾನಗಳಿಸಿ ಪೊಲೀಸ್ ಇಲಾಖೆಯಿಂದ ಬಹುಮಾನ ಪಡೆದರು. ಐಕ್ಯೂಎಸಿ ಸಂಯೋಜಕಿ ಡಾ.ಎಸ್.ಡಿ. ಸೊರಗಾಂವಿ, ಡಾ. ಸುಭಾಸ ಬಿಜ್ಜರಗಿ, ರಾಜ್ಯಶಾಸ ವಿಭಾಗದ ಮುಖ್ಯಸ್ಥ ಅಭಯ ಉಗಾರೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net