ಜ್ವರ ಹರಡದಂತೆ ಜಾಗೃತಿ ವಹಿಸಿ

BDM30-2
ಬಾದಾಮಿ ಪಟ್ಟಣದಲ್ಲಿ ರಾಷ್ಟ್ರೀಯ ಡೆಂೆ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಡಾ. ಕುಸುಮಾ ಮಾಗಿ ಚಾಲನೆ ನೀಡಿದರು. ಡಾ. ಎಂ.ಬಿ. ಪಾಟೀಲ, ಡಾ. ಹೂವಪ್ಪ ಗಾಣಿಗೇರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ಇತರರಿದ್ದರು.
Published on

ಬಾದಾಮಿ: ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕೈಗೊಂಡು ಸೊಳ್ಳೆ ನಿಯಂತ್ರಿಸಿ ಡೆಂೆ ಜ್ವರ ಹರಡದಂತೆ ಜಾಗೃತಿ ವಹಿಸಬೇಕೆಂದು ಜಿಲ್ಲಾ ಮಲೇರಿಯಾ ನಿಯತ್ರಣಾಧಿಕಾರಿ ಡಾ. ಕುಸುಮಾ ಮಾಗಿ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಡೆಂೆ ದಿನಾಚರಣೆ ನಿಮಿತ್ತ ತಾಲೂಕುಮಟ್ಟದ ಜನಜಾಗೃತಿ ಜಾಥಾ ಮತ್ತು ಗ್ರಾಪಂ ಪಿಡಿಒಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೋಗ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅತ್ಯಗತ್ಯವಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿ, ರಾಷ್ಟ್ರೀಯ ಕೀಟಜನ್ಯ ರೋಗಗಳ ತಡೆಗಟ್ಟುವ ಬಗ್ಗೆ ಅಭಿವೃದ್ಧಿ ಅಧಿಕಾರಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಡಾ.ಎಂ.ಎಲ್. ಹಸರೆಡ್ಡಿ, ಎಲ್.ವಿ. ಹಿರೇಗೌಡರ ಉಪನ್ಯಾಸ ನೀಡಿದರು.
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹೂವಪ್ಪ ಗಾಣಿಗೇರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ಮಾತನಾಡಿದರು.

ಡಾ.ಕೆ.ಟಿ. ಗಾಜಿ, ಕೆ.ಪಿ. ಹಂಪಿಹೋಳಿ, ಎ.ಜಿ. ನಿಲವಾಣಿ, ಲಕ್ಷ್ಮೀ ಡಬಗಲ್, ಎನ್.ಸಿ. ನಾಮದೇವ, ಮಹಾಲಿಂಗೇಶ ಯಂಡಿಗೇರಿ ಇತರರಿದ್ದರು. ಎಂ.ಎಸ್. ಅಂಗಡಿ ಸ್ವಾಗತಿಸಿದರು. ಆರ್.ಎಸ್. ಅಂಬಿಗೇರ ನಿರೂಪಿಸಿದರು. ಡಿ.ಇ. ಅರವಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net