

ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸ ಕುರುಗುಂದ ಗ್ರಾಮದ ನಿವಾಸಿ ಅವಿವಾಹಿತ ಸೋಮನಾಥ ವೀರಯ್ಯ ಕುಲಕರ್ಣಿ (96) ಇಂದು ನಿಧನರಾಗಿದ್ದಾರೆ
ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಬೈಲಹೊಂಗಲ ಮುಖಾಂತರ ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನವಾಗಿ ನೀಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ದೇಹದಾನ ಮಾಡಿದ ಕುಲಕರ್ಣಿ ಕುಟುಂಬದವರಿಗೆ ಕೃತಜ್ಞತೆ ತಿಳಿಸಿದ್ದಾರೆ.