ಸೈಕಲ್ ಏರಿ ಚಾಲಕರ ಹಾಜರಾತಿ, ಕಸ ಸಂಗ್ರಹ ವಾಹನವೇರಿ ಕಾರ್ಮಿಕರ ಕಾರ್ಯವೈಖರಿ ಪರಿಸೀಲಿಸಿದ ಪಾಲಿಕೆ ಆಯುಕ್ತ

IMG_20230807_095247.jpg
Published on

ಬೆಳಗಾವಿ : ಬೆಳ್ಳಂಬೆಳಗ್ಗೆ ಸೈಕಲ್ ಏರಿ ಕಸ ವಿಲೇವಾರಿ ವಾಹನ ಶಾಖೆಗೆ ಮಹಾನಗರ ಪಾಲಿಕೆ ಆಯುಕ್ತ‌ ಅಶೋಕ ದುಡಗುಂಟಿ ಅವರು,  ದಿಢೀರ್ ಭೇಟಿ ನೀಡಿ  ಮಹಾನಗರ ಪಾಲಿಕೆಯ ಕಸ ವಿಲೇವಾರಿ ವಾಹನದಲ್ಲೇ ವಿವಿಧ ವಾರ್ಡ್ ಗಳಲ್ಲಕ ಸಂಚರಿಸಿ ಪೌರಕಾರ್ಮಿಕರ ಕಾರ್ಯವೈಖರಿ ಹಾಗೂ ಕಸ ವಿಲೇವಾರಿ ಕಾರ್ಯ ಪರಿಶೀಲಿಸಿದರು.

ಸೋಮವಾರ ಬೆಳಿಗ್ಗೆ 5-30ಕ್ಕೆ ಪಾಲಿಕೆಯ ಆಯುಕ್ತ ಅಶೋಕ ದುಡಗುಂಡಿ ಅವರು ಸೈಕಲ್ ಸವಾರಿ ಮಾಡಿ ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನಗಳನ್ನು ಪರಿಶೀಲಿಸಿದರು. ಅಲ್ಲದೆ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗು ಎಲ್ಲ ವಾಹನ ಚಾಲಕರಿಗೆ ಹಾಗೂ ಕ್ಲೀನರ್ಸಗಳಿಗೆ ಬೆಳಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಬಳಿಕ ಸ್ವತಃ ಪಾಲಿಕೆಯ ಕಸದ ಸಂಗ್ರಹ ವಾಹನದಲ್ಲಿ ಕುಳಿತುಕೊಂಡು ಪೋರ್ಟ್ ರಸ್ತೆಯ ಡಿಸಿಸಿ ಬ್ಯಾಂಕ್ ಹತ್ತಿರ ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ವಾರ್ಡ್ ನಂಬರ 43ರ ವರೆಗೆ ಸಂಚರಿಸಿ ಪಾಲಿಕೆ ಸದಸ್ಯೆ ವಾಣಿ ವಿಲಾಸ ಜೋಶಿ ಅವರೊಂದಿಗೆ ಅನಗೋಳ  ಸ್ಮಶಾನದ ಸ್ಥಳ ಪರಿಶೀಲಿಸಿ ಅಲ್ಲಿ ಸ್ವಚ್ಜತೆ ಕಾಪಾಡುವಂತೆ ಹಾಗೂ ಗೀಡಗಳನ್ನು ನೆಡುವಂತೆ, ವಿದ್ಯುತ ದೀಪಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.‌

ನಂತರ ವಾರ್ಡ ನಂ.43ರ ವಾರ್ಡ ಸಂಚರಿಸಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಂತೆ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು ಮತ್ತು ಸಾರ್ವಜನಿಕರೊಂದಿಗೆ ಅವರ ಸಮಸ್ಯೆ ಆಲಿಸಿದರು.
ಅಲ್ಲದೆ ಅತೀಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿರುವ ಕಟ್ಟಡದ ಪರಿಶೀಲನೆ ಮಾಡಿ ಸಂಬಂಧಿತರಿಗೆ ಪಾಲಿಕೆಗೆ ವಿವರ ಸಲ್ಲಿಸುವಂತೆ ಸೂಚಿಸಿದರು. ಅಲ್ಲಿಂದ ಭಾಗ್ಯನಗರ 1 ಮತ್ತು 2ನೇ ಕ್ರಾಸಗೆ ತೆರಳಿ, ಅಲ್ಲಿನ ಕಸ ವಿಲೇವಾರಿ, ನಾಲಾಗಳ ಸ್ವಚ್ಚತಾ, ಪಾಲಿಕೆಯ ಖುಲ್ಲಾ ಜಾಗೆಗಳ ಪರಿಶೀಲನೆ ಸಂಬಂಧಿಸಿದವರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net