ಬಿಡಿಇ ಕಾಲೇಜ್ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

hn-12-4
ಬಾಲ್ ಬ್ಯಾಡ್ಮಿಂಟನ್ ಹಾಗೂ ಟೆಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿಜಯಪುರ ಬಿಡಿಇ ಬಾಲಕಿಯರ ಸಂಯುಕ್ತ ಪಪೂ ಕಾಲೇಜ್ ವಿದ್ಯಾರ್ಥಿನಿಯರೊಂದಿಗೆ ಸಂಸ್ಥೆ ಅಧ್ಯಕ್ಷ ಕೆ.ಬಿ.ಕುಲಕರ್ಣಿ, ಆರ್.ಪಿ.ಚಿಕ್ಕಲಕಿ, ಡಿ.ಕೆ.ಕುಲಕರ್ಣಿ ಇದ್ದಾರೆ.
Published on

ವಿಜಯಪುರ: ನಗರದ ಬಿಡಿಇ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಹಾಗೂ ಟೆಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಟೇಬಲ್ ಟೆನಿಸ್ ತಂಡದಲ್ಲಿ ವಿದ್ಯಾಶ್ರೀ ದಳವಾಯಿ, ಭಾಗ್ಯಶ್ರೀ ಗೊಳಸಂಗಿ, ಪೂರ್ಣಿಮಾ ಗುಂಡಿ, ವಿಜಯಲಕ್ಷ್ಮಿ ಲಕ್ಕೊಂಡ ಹಾಗೂ ಶಾಂಭವಿ ಬೊಹಿತೆ ಇದ್ದರು. ಬಾಲ್ ಬ್ಯಾಡ್ಮಿಂಟನ್ ತಂಡದಲ್ಲಿ ರೇಖಾ ಹೂಗಾರ, ಕೋಮಲ್ ರಾಠೋಡ, ಋತುಜಾ ಎಡ್ರಾವಕರ, ಸಂಗೀತಾ ನಾಗೋಡ, ಸೃಷ್ಟಿ ಚಿಕ್ಕೊಂಡ, ಶ್ವೇತಾ ತಳೇವಾಡ ಭಾಗವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಕೆ.ಬಿ.ಕುಲಕರ್ಣಿ ಮಮದಾಪುರ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಆರ್.ಪಿ.ಚಿಕ್ಕಲಕಿ, ಕಾಲೇಜ್ ಪ್ರಾಚಾರ್ಯೆ ಡಿ.ಕೆ.ಕುಲಕರ್ಣಿ, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಜೋಶಿ ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net