ಬಿಡಿಸಿಸಿ ಬ್ಯಾಂಕ್‌ನಿಂದ 400 ಕೋಟಿ ರೂ. ಸಾಲ

16Rayabag1
Published on

ರಾಯಬಾಗ: ತಾಲೂಕಿನ ರೈತರಿಗೆ ಬಿಡಿಸಿಸಿ ಬ್ಯಾಂಕ್ 400 ಕೋಟಿ ರೂ. ಬೆಳೆ ಸಾಲ ನೀಡಿ ಆರ್ಥಿಕವಾಗಿ ಸಬಲರನ್ನಾಗಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.

ತಾಲೂಕಿನ ನಸಲಾಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 105ನೇ ಶಾಖೆ ಉದ್ಘಾಟಿಸಿ ಮಾತನಾಡಿ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ವಿವಿಧ ಸಾಲ ಒದಗಿಸಿ ಅಭಿವೃದ್ಧಿಗೆ ಕೈಜೋಡಿಸಲಾಗಿದೆ. ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಹೆಚ್ಚು ರೈತರಿಗೆ ಆಧಾರವಾಗಿರುವ ಏಕೈಕ ಹಣಕಾಸು ಸಂಸ್ಥೆಯಾಗಿದೆ ಎಂದರು.

ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿದರು. ಬಾವನ ಸೌಂದತ್ತಿಯ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಹಾಗೂ ಶ್ರೀಸಿದ್ಧಸೇನ ಮುನಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಬಿಡಿಸಿಸಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಜಿ.ಕಲಾವಂತ, ಹಿರಿಯ ಧುರೀಣ ಈರಗೌಡ ಪಾಟೀಲ, ಡಾ.ಎನ್.ಎ.ಮಗದುಮ್ಮ, ಶಂಕರ ಕರಿಬಸನ್ನವರ, ಪಾಸಗೌಡ ಪಾಟೀಲ, ರಾಜಗೌಡ ಪಾಟೀಲ, ರಾವಸಾಹೇಬ ಪಾಟೀಲ, ಮಹಾವೀರ ಪಾಟೀಲ, ಅರುಣ ನಾಯಿಕ, ಕೆ.ಸಿ.ಕಲ್ಮಠ, ಸುನೀಲ ಪಾಟೀಲ, ಶಿವಾನಂದ ಪಾಟೀಲ, ಬಾಹುಬಲಿ ಪಾಟೀಲ, ಎನ್.ಎಸ್.ಪಾಟೀಲ, ಪೃಥ್ವಿರಾಜ ಜಾಧವ, ತುಕಾರಾಮ ಮಾಳಿ, ಶಿವಪ್ಪ ನಾಯಿಕ, ಮಹಾದೇವ ನಾಯಿಕ, ಬಾಲಚಂದ್ರ ದತ್ತವಾಡೆ, ಅಪ್ಪಾಸಾಹೇಬ ಮಾಳಿ, ಜಿನೇಶ್ವರ ಮಗದುಮ್ಮ, ಸತ್ತೆಪ್ಪ ಭಿಷ್ಟೆ, ಚೇತನ ಕಾಟೆ,

ಸುಖದೇವ ಚಾವರೆ, ಎಸ್.ಜಿ.ಖೋಠಬಾರೆ, ಎನ್.ಕೆ.ಕರೆನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net