ಪ್ರಗತಿ ಪಥದಲ್ಲಿ ಸಾಗುತ್ತಿದೆ ಬಿಡಿಸಿಸಿ ಬ್ಯಾಂಕ್

BDCC Bank is on a path of progress
BDCC Bank is on a path of progress
Published on

ಹುನಗುಂದ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯದಲ್ಲಿಯೇ ಅತ್ಯಂತ ಪ್ರಗತಿ ಪಥದಲ್ಲಿ ಸಾಗುತ್ತಿರುವ ಬ್ಯಾಂಕ್ ಆಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಲಕ್ಷ್ಮೀ ನಗರದಲ್ಲಿ ಶನಿವಾರ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಹುನಗುಂದ ಶಾಖೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೇರವೆರಿಸಿ ಮಾತನಾಡಿದ ಅವರು, 3500 ಕೋಟಿ ರೂ. ಡಿಪಾಜಿಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಹೊಂದಿದ್ದು, ಕಳೆದ 10 ವರ್ಷದ ಹಿಂದೆ ಜಾಗ ಖರೀದಿಸಿದೆ. ಆದರೆ, ಕಟ್ಟಡ ನಿರ್ಮಾಣ ಆಗಿರಲಿಲ್ಲ. ಇದೀಗ ಕಟ್ಟಡದ ಭೂಮಿ ಪೂಜೆಯಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣವಾಗಲಿದೆ. ಸಹಕಾರಿ ಕ್ಷೇತ್ರಕ್ಕೆ ಸಹಕಾರ ಇದ್ದರೆ ಬೆಳೆಯಲು ಸಾಧ್ಯ. ರೈತರಗಾಗಿ ಕೃಷಿ ಪತ್ತಿನ ಸಂಘಗಳು ರೈತರ ಬೆನ್ನೆಲುಬುಗಳಾಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಕಾರ್ಯನಿರ್ವಹಿಸುತ್ತಿವೆ ಎಂದರು.

ರೈತರಿಗಾಗಿ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ, ಪಂಪ್‌ಸೆಟ್ ಸಾಲ ಸೇರಿ ಅನೇಕ ರೀತಿಯಲ್ಲಿ ಪಿಕೆಪಿಎಸ್ ಸಂಘಗಳು ರೈತರ ಆರ್ಥಿಕ ಸುಧಾರಣೆಗಾಗಿ ಶ್ರಮಿಸುತ್ತಿವೆ. ಹೊಸ ಹೊಸ ಕೃಷಿ ಪತ್ತಿನ ಸಂಘಗಳನ್ನು ಹುನಗುಂದ-ಇಳಕಲ್ಲ ತಾಲೂಕಿನಲ್ಲಿ ರಚನೆ ಮಾಡುತ್ತಿದ್ದೇವೆ. ರೈತರ ಏಳಿಗಾಗಿ, ಬಡಜನರ, ಕೂಲಿ ಕಾರ್ಮಿಕರು, ಸ್ವಯಂ ಉದ್ಯೋಗ ಮಾಡುವರಿಗೆ ಸಹಾಯ ಹಸ್ತ ನೀಡುತ್ತ ಸಹಕಾರಿ ಕ್ಷೇತ್ರ ಇರುತ್ತದೆ ಎಂದರು.

ಬಾಗಲಕೋಟ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇವಲ 250 ಕೋಟಿ ರೂ. ಬಂಡವಾಳದಿಂದ ಆರಂಭವಾದ ಬ್ಯಾಂಕ್ ಇಂದು 3500 ಕೋಟಿ ರೂ. ಬಂಡವಾಳ ಹೊಂದಿರುವ ಬ್ಯಾಂಕ್ ಆಗಿದೆ. ಕೆಲವೇ ವರ್ಷದಲ್ಲಿ ಮಹತ್ವರವಾದ ಸಾಧನೆ ಮಾಡಿದ ಬ್ಯಾಂಕ್ ಇದಾಗಿದೆ. ಈ ಸಾಧನೆಗೆ ಜಿಲ್ಲೆಯ ರೈತರ, ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುವರು, ಸಂಘ-ಸಂಸ್ಥೆಗಳು ಮತ್ತು ಬ್ಯಾಂಕಿನ ಸಿಬ್ಬಂದಿ, ಆಡಳಿತ ಮಂಡಳಿಯ ನಿರ್ದೇಶಕರು ಸದಸ್ಯರ ಪಾತ್ರ ಮಹತ್ವದಾಗಿದೆ ಎಂದರು.

ಜಿಲ್ಲೆಯ ಎಲ್ಲ ಪಿಕೆಪಿಎಸ್‌ಗಳಲ್ಲಿನ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲವನ್ನು ವಿತರಣೆ ಮಾಡುತ್ತಿದ್ದು ಅದರ ಲಾಭ ಪಡೆದ ರೈತರೆಲ್ಲರೂ ತಮ್ಮಲ್ಲಿರುವ ಉಳಿತಾಯದ ಹಣವನ್ನು ಪಿಕೆಪಿಎಸ್ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಮಾಡುವುದರಿಂದ ಪಿಕೆಪಿಎಸ್ ಮತ್ತು ಡಿಸಿಸಿ ಬ್ಯಾಂಕಿಗೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಆರ್‌ಟಿಜಿಎಸ್, ನೆಫ್ಟ್ ನಂತಹ ಆನ್‌ಲೈನ್ ಸೌಲಭ್ಯಗಳ ದೊರೆಯುತ್ತಿದ್ದು ಅದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಮನವಿ ಮಾಡಿದರು.

ಬಾಗಲಕೋಟ ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕರು ಪ್ರಕಾಶ ತಪಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎನ್. ನೀಲಪ್ಪನವರ, ಪ್ರಧಾನ ವ್ಯವಸ್ಥಾಪಕ ಎಸ್.ಎ. ಮೀರ್ಜಿ, ವಿಜಯ ಮಹಾಂತೇಶ ಬ್ಯಾಂಕಿನ ಅಧ್ಯಕ್ಷೆ ಶಕುಂತಲಾ ಗಂಜೀಹಾಳ, ಪುರಸಭೆ ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಹಿರಿಯ ಶಾಖಾ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಜಾಲಿಹಾಳ, ಸಿದ್ದು ಭದ್ರಶೆಟ್ಟಿ, ಮಹಾಂತೇಶ ಹೊಸೂರ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಬಸವರಾಜ ಹೊಸೂರ, ಟಿಎಪಿಸಿಎಂ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ, ಪಿಕೆಪಿಎಸ್ ನಿರ್ದೇಶಕ ಕುಮಾರ ಘಟ್ಟಿಗನೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net