ಶೀಘ್ರ ಬಿಡಿಸಿಸಿ ಬ್ಯಾಂಕ್​ ಶಾಖೆ ಪ್ರಾರಂಭ

1Raibag2
Published on

ರಾಯಬಾಗ: ತಾಲೂಕಿನ ನಿಪನಾಳ, ನಸಲಾಪುರ ಗ್ರಾಮಗಳಲ್ಲಿ ಬಿಡಿಸಿಸಿ ಬ್ಯಾಂಕ್​ನ ನೂತನ ಶಾಖೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್​ ಅಧ್ಯ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು.

ಸಮೀಪದ ಬಿಡಿಸಿಸಿ ಬ್ಯಾಂಕ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅವರ ಜನ್ಮದಿನದಂದು ಮಾತನಾಡಿ, ಬ್ಯಾಂಕ್​ 2024&25ನೇ ಸಾಲಿನಲ್ಲಿ ಬ್ಯಾಂಕ್​ 34 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅತೀ ಹೆಚ್ಚು ಲಾಭ ಇದಾಗಿದೆ ಎಂದರು. ಬ್ಯಾಂಕ್​ನ ಶತಮಾನೋತ್ಸವ ಕಾರ್ಯಕ್ರಮವು ಮೇ ತಿಂಗಳ ಮೊದಲ ವಾರದಲ್ಲಿ ನಡೆಸಲಾಗುವುದು ಎಂದು ಆಡಳಿತ ಮಂಡಳಿ ಸಭೆಯಲ್ಲಿ ರ್ನಿಣಯಿಸಲಾಗಿದೆ. ಮುಂದಿನ ಸಭೆಯಲ್ಲಿ ನಿರ್ದೇಶಕರಿಗೆ ಶತಮಾನೋತ್ಸವ ಕಾರ್ಯಕ್ರಮದ ಜವಾಬ್ದಾರಿ ವಹಿಸಿ ಕೊಡಲಾಗುವುದು. ಬ್ಯಾಂಕ್​ನ ಎಲ್ಲ ಸದಸ್ಯ ಸಂಗಳಿಗೆ ಉತ್ತಮವಾದ ಶತಮಾನೋತ್ಸವ ಕಾಣಿಕೆ ನೀಡಲಾಗುವುದು ಎಂದರು.

ಪ್ರಕಾಶ ರಾಯಣ್ಣವರ ಮಾತನಾಡಿ, ಬ್ಯಾಂಕ್​ ನೌಕರರಿಗೆ ತೊಂದರೆ ಆಗದಂತೆ ಅವರ ಬೇಡಿಕೆಗಳ ಈಡೇರಿಕೆಗೆ ಸಂದ ಅಧ್ಯರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ತಾಲೂಕು ನಿಯಂತ್ರಣಾಧಿಕಾರಿ ಶಿವಾನಂದ ಪಾಟೀಲ, ನಿಂಗರಾಜ ಕರೆಣ್ಣವರ, ಬಿ.ಐ.ಚಿದಾನಂದ, ಮಹಾಲಿಂಗಪ್ಪ ಮರಡಿ, ಹರೀಶ ಕುಲಗುಡೆ, ಮಾರುತಿ ಪಡಚೆ, ಮಹಾದೇವ ಶಿರಗೂರೆ, ಯಲ್ಲಪ್ಪ ತಳವಾರ, ಲಕ್ಷ$್ಮಣ ದಾನಿಹಾಳ, ನಿಂಗಪ್ಪ ದನಗರ, ಅಪ್ಪಣ್ಣ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net