ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಿ

10 sirgere 01
ಸಿರಿಗೇರಿಯಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುವಂತೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿಗೆ ಸಿರಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯೋಗ ಮನವಿ ಸಲ್ಲಿಸಿತು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ವೃತ್ತಿಪರ ನಿರ್ದೇಶಕ ಅಕ್ಕಿ ಬಸವರಾಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ .ಜಯಪ್ರಕಾಶ್ ಇತರರಿದ್ದರು.
Published on

ಸಿರಿಗೇರಿ: ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ತೆರೆಯುವಂತೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿಗೆ ಸ್ಥಳೀಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮನವಿ ಸಲ್ಲಿಸಿದರು.

ಸಿರಿಗೇರಿ ಪ್ರಾ.ಕೃ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಎಂ ನಾಗರಾಜ ಸ್ವಾಮಿ ಮಾತನಾಡಿ, ಸಿರಿಗೇರಿಯಲ್ಲಿ 20 ಸಾವಿರ ಜನಸಂಖ್ಯೆ ಇದ್ದು, ಬ್ಯಾಂಕ್ ಶಾಖೆ ತೆರೆದರೆ ಸುತ್ತಮುತ್ತಲಿನ 20 ಹಳ್ಳಿಗಳ ಜನರಿಗೂ ಅನುಕೂಲವಾಗಲಿದೆ ಎಂದರು.

ಸಂಘದ ನಿರ್ದೇಶಕ ಹಾಗಲೂರು ಮಲ್ಲನಗೌಡ ಮಾತನಾಡಿ, ಸಿರಗುಪ್ಪ ತಾಲೂಕಿನಲ್ಲಿ ಸಿರಿಗೇರಿ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ ಎಂದರು. ಸಂಘದ ಅಧ್ಯಕ್ಷ ಬಿ.ಸೋಮಶೇಖರಪ್ಪ, ಪ್ರಮುಖರಾದ ಬಿ.ನಾಗೇಂದ್ರ, ಸಿ.ಎಂ ನಾಗರಾಜಸ್ವಾಮಿ, ನಿರ್ದೇಶಕರಾದ ಗರ್ಜಿಲಿಂಗಪ್ಪ, ಬಿ.ವೀರೇಶ್, ಬಿ.ಮಲ್ಲಯ್ಯ ನಾಯಕ್, ಭಜಂತ್ರಿ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net