ಬಿಡಿಎಯಿಂದ 10 ಕೋಟಿ ಮೌಲ್ಯದ ಸ್ವತ್ತು ಮರುವಶ

bda site
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣದ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮಂಗಳವಾರ ರಿಂಗ್ ರಸ್ತೆಯ ಬಳಿಯಿರುವ ಎಚ್‌ಬಿಆರ್ ಲೇಔಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಸ್ವತ್ತನ್ನು ಮರುವಶಕ್ಕೆ ಪಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಹೆಣ್ಣೂರು ಗ್ರಾಮದ ಸರ್ವೆ ನಂ. 56/2ರ 8.5 ಗುಂಟೆ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿದ್ದರು. ಇವುಗಳನ್ನು ಪ್ರಾಧಿಕಾರದ ಕಾರ್ಯಪಡೆಯು ಜೆಸಿಬಿ ಯಂತ್ರವನ್ನು ಬಳಸಿ ತೆರವು ಮಾಡಿ ಸ್ವತ್ತನ್ನು ವಶಪಡಿಸಿಕೊಂಡಿತು.

ಕಾರ್ಯಾಚರಣೆಯನ್ನು ಬಿಡಿಎ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಡೆಯಿತು. ಅಭಿಯಂತರ ಅಧಿಕಾರಿ-3, ಕಾರ್ಯಪಾಲಕ ಅಭಿಯಂತರರು, ಉತ್ತರ ವಿಭಾಗ ಹಾಗೂ ಕೆಂಪೇಗೌಡ ಬಡಾವಣೆಯ ಎಇಇ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯ ನೆರವೇರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮಾನದ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net