ಬಿಡಿಎ: ಅ.3ರಿಂದ 16ರವರೆಗೆ ಕ್ರಯಪತ್ರ ಮೇಳ

bda flat
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಲ್ಲಿ ಫ್ಲ್ಯಾಟ್ ಹಾಗೂ ವಿಲ್ಲಾಗಳನ್ನು ಖರೀದಿಸಿರುವ ಗ್ರಾಹಕರಿಗೆ ಕ್ರಯಪತ್ರ ವಿತರಿಸಲು ಅ.3ರಿಂದ 16ರವರೆಗೆ ವಿಶೇಷ ಮೇಳವನ್ನು ಆಯೋಜಿಸಿದೆ.

ಇತ್ತೀಚಿನ ದಿನಗಳಲ್ಲಿ ಪ್ರಾಧಿಕಾರ ನಡೆಸಿದ ಮೇಳ ಮೇಳದಲ್ಲಿ ನೂರಾರು ಮಂದಿ ಫ್ಲ್ಯಾಟ್/ ವಿಲ್ಲಾ ಖರೀದಿಸಿದ್ದರು. ಇವುಗಳ ಪೈಕಿ ಸುಮಾರು 400 ಮಂದಿಗೆ ಕ್ರಯಪತ್ರ ನೋಂದಾಯಿಸಿ ಕೊಡುವುದು ಬಾಕಿ ಇದೆ. ಇಂತಹವರಿಗೆ ಕ್ರಯಪತ್ರ ವಿತರಿಸುವ ಸಂಬಂಧ ಸೆ.30ರ ಒಳಗಾಗಿ ಸ್ವತ್ತುದಾರರು ತಮ್ಮ್ಲಾ ಫ್ಲ್ಯಾಟ್ / ವಿಲ್ಲಾಗೆ ಸಂಬಂಧಿಸಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸ್ವಯಂ ದೃಢೀಕರಣ ಪತ್ರ, ಬ್ಯಾಂಕ್ ನಿರಾಪೇಕ್ಷಣಾ ಪತ್ರ, ಫೋಟೋ ಹಾಗೂ 3 ಸಂಖ್ಯೆಯ ಭಾವಚಿತ್ರವನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ. ಜತೆಗೆ ಖರೀದಿಸಲಾದ ಫ್ಲ್ಯಾಟ್/ ವಿಲ್ಲಾಗಳ ಮೊತ್ತದಲ್ಲಿ ಬಾಕಿ ಉಳಿಸಿಕೊಂಡಿದ್ದಲ್ಲಿ ಆ ಹಣವನ್ನೂ ಪಾವತಿಸಿ ಹಂಚಿಕೆ ಪತ್ರ ಸಹಿತ ಎಲ್ಲ ದಾಖಲೆಗಳನ್ನು ಒದಗಿಸಬೇಕು ಎಂದು ಬಿಡಿಎ ಅಧಿಕಾರಿಗಳು ಕೋರಿದ್ದಾರೆ.

ಪೂರ್ಣ ದಾಖಲೆ ಮತ್ತು ಹಣ ಪಾವತಿಸಿದವರಿಗೆ ಮೊದಲು ಬಂದವರಿಗೆ ಪ್ರಥಮ ಆದ್ಯತೆ ಆಧಾರದ ಮೇಲೆ ಅ.3ರಿಂದ 16ರವರೆಗೆ ನಿಗದಿಯಾಗಿರುವ ಮೇಳದಲ್ಲಿ ಕ್ರಯಪತ್ರ ನೋಂದಣಿ ಮಾಡಿಕೊಡಲಾಗುತ್ತದೆ. ಮೇಳವು ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ನಡೆಯಲಿದೆ. ಮೇಳದ ಹಾಗೂ ನೋಂದಣಿ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹುದು ಎಂದು ಬಿಡಿಎ ಆರ್ಥಿಕ ಸದಸ್ಯ ಡಾ. ಎ.ಲೋಕೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net