

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ 30 ಸಾವಿರ ಸಸಿಗಳನ್ನು ನೆಡಲು ಕೆ-ರೈಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಗುರುವಾರ (ಜೂ.5) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮವು ಜೂನ್ ತಿಂಗಳ ಪೂರ್ತಿ ನಡೆಯಲಿದೆ. ಆ ಬಳಿಕ ಮಳೆಗಾಲದೊಳಗೆ ಯೋಜನೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಹೈಕೋರ್ಟ್ ಸೂಚನೆಯಂತೆ ಟಿಇಸಿ ಮೇಲ್ಚಿಚಾರಣೆಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ.
ಈಗಾಗಲೇ ಬನಶಂಕರಿ, ವಿಶ್ವೇಶ್ವರಯ್ಯ, ಅಂಜನಾಪುರ ಸೇರಿ ವಿವಿಧ ಲೇಔಟ್‌ಗಳಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಇವುಗಳಲ್ಲಿ ಬಹುತೇಕ ಮರಗಳಾಗಿ ಬೆಳೆದಿವೆ. ಕಳೆದ ವರ್ಷ ನಿರ್ಮಾಣ ಹಂತದಲ್ಲಿರುವ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 40 ಸಾವಿರ ಗಿಡಗಳನ್ನು ನೆಡಲಾಗಿತ್ತು. ಕೆಂಪೇಗೌಡ ಲೇಔಟ್‌ನಲ್ಲಿ ಈಗಾಗಲೇ 2-3 ವರ್ಷದಲ್ಲಿ ಕೆಲಸ ಸಾವಿರ ಸಸಿಗಳನ್ನು ನೆಟ್ಟಿದ್ದು, ಈ ಬಾರಿ ಇಲ್ಲಿನ 9 ಬ್ಲಾಕ್‌ಗಳಲ್ಲಿ ಕೇಂದ್ರೀಕರಿಸಲಾಗುವುದು. ಕೆರೆ, ನಾಲಾ ಬಫರ್ ಜಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಡಲಾಗುವುದು ಎಂದು ಪ್ರಾಧಿಕಾರದ ತೊಟಗಾರಿಕೆ ವಿಭಾಗದ ಡಿಸಿಎಫ್ ಚರಣ್ ತಿಳಿಸಿದ್ದಾರೆ.
2024-25ರಲ್ಲಿ ವಿವಿಧ ಲೇಔಟ್‌ಗಳಲ್ಲಿ ನೆಟ್ಟ ಸಸಿ ವಿವರ:
ಅಂಜನಾಪುರ 5,700
ಬನಶಂಕರಿ 2,800
ಶಿವರಾಮ ಕಾರಂತ 37,500
ವಿಶ್ವೇಶ್ವರಯ್ಯ 2,800
ಕೆಂಪೇಗೌಡ 11,400
ಒಟ್ಟು 60,200