125 ಮಂದಿಗೆ ಬಿಡಿಎ ಫ್ಲ್ಯಾಟ್ ಹಂಚಿಕೆ ಪತ್ರ ವಿತರಣೆ

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಣಿಮಿಣಿಕೆಯ ವಸತಿ ಸಮುಚ್ಛಯದಲ್ಲಿ ಶನಿವಾರ ಆಯೋಜಿಸಿದ್ದ ಫ್ಲ್ಯಾಟ್ ಮೇಳಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 125 ಮಂದಿಗೆ ಸ್ಥಳದಲ್ಲೇ ಹಂಚಿಕೆ ಪತ್ರವನ್ನು ಹಸ್ತಾಂತರಿಸಲಾಯಿತು.

ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. 200 ಫ್ಲ್ಯಾಟ್​​ಗಳನ್ನು ಖರೀದಿಸಿ, ಇದರಲ್ಲಿ ಸುಮಾರು 150 ಸಾರ್ವಜನಿಕರು ಫ್ಲ್ಯಾಟ್ ಆರಂಭಿಕ ಠೇವಣಿಯನ್ನು ಸ್ಥಳದಲ್ಲಿಯೇ ಪಾವತಿಸಿದರು. ಇಂತಹವರ ಪೈಕಿ 125 ಮಂದಿಗೆ ಹಂಚಿಕೆ ಪತ್ರ ನೀಡಲಾಯಿತು. ಉಳಿದವರು ಕೆಲ ದಿನಗಳಲ್ಲಿ ಠೇವಣಿ ಮೊತ್ತ ಪಾವತಿಸಲು ಸಮಯಾವಕಾಶ ಪಡೆದಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜನವರಿಯಿಂದ ಪ್ರತೀ ತಿಂಗಳೂ ನಡೆಯುತ್ತಿರುವ ಮೇಳದಲ್ಲಿ ನೂರಾರು ಮಂದಿ ಪಾಲ್ಗೊಂಡು ವಸತಿ ಘಟಕಗಳನ್ನು ಪಡೆಯುತ್ತಿದ್ದಾರೆ. ಉತ್ತಮ ಸೌಕರ್ಯ ಕಲ್ಪಿಸಿರುವುದರಿಂದ ನಮ್ಮ ಸಂಸ್ಥೆಯ ಫ್ಲ್ಯಾಟ್​​ಗಳು ಮಾರಾಟವಾಗುತ್ತಿವೆ ಎಂದು ಬಿಡಿಎ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮೇಳದಲ್ಲಿ ಜನರಿಗೆ ವಸತಿ ಘಟಕ ಖರೀದಿಸಲು ಬ್ಯಾಂಕ್ ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್​​ ಬರೋಡಾ ಸೇರಿ ಹಲವು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು, ಜನರಿಗೆ ಮಾರ್ಗದರ್ಶನ ಮಾಡಿದರು.

ಮೇಳದಲ್ಲಿ ಬಿಡಿಎ ಆರ್ಥಿಕ ಸದಸ್ಯ ಡಾ. ಎ.ಲೋಕೇಶ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಇಂಬವಳ್ಳಿ, ಬಸವರೆಡ್ಡಿ, ಭುವನೇಶ್ವರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net