ಬಿ ಕಾಂ ವಿಭಾಗದಲ್ಲಿ ರ್ಯಾಂಕ್ ಪಡೆದ ಲಕ್ಷ್ಮಿ ಬಳ್ಳಾರಿ.

IMG_20230819_132812
Published on

ಗದಗ: ಕರ್ನಾಟಕ ವಿಶ್ವವಿದ್ಯಾಲಯ 2021-22 ನೇ ಸಾಲಿನ ಬಿ ಕಾಂ ಅಂತಿಮ ವರ್ಷದ ಫಲಿತಾಂಶವನ್ನು ಘೋಷಣೆ ಮಾಡಿದ್ದು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ. ಬಸವಣ್ಣಪ್ಪ. ಬಳ್ಳಾರಿ . 96.73% ಪ್ರತಿಶತದೊಂದಿಗೆ ವಿಶ್ವವಿದ್ಯಾಲಯಕ್ಕೆ ಬಿ ಕಾಂ ವಿಭಾಗದಲ್ಲಿ ಐದನೆಯ ರಾಂಕ್ ಗಳಿಸಿದ್ದಾಳೆ.

ಈ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ, ಚೇರ್ಮನ್ನರಾದ ಸಿಎ ಶ್ರೀ ಆನಂದ್ ಪೋತ್ನಿಸ್, ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿ,  ಶ್ರೀ ಜಿ  ವಿ ಬಳಗಾನೂರ, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಖಿoಡಿ, ಸಹ ಕಾರ್ಯದರ್ಶಿಗಳಾದ ಶ್ರೀ ಎಸ್ ಜಿ ಬೆನೆಕಲ್, ಖಜಾಂಚಿ ಎಂ ಎಲ್ ಪೋತ್ನಿಸ್, ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಕೆ ಗಿರಿರಾಜ್ ಕುಮಾರ್, ಉಪ ಪ್ರಾಚಾರ್ಯರಾದ ಡಾ. ವಿ. ಟಿ. ನಾಯ್ಕರ್ ಹಾಗೂ ಅಂಗ ಸಂಸ್ಥೆಗಳ ಪ್ರಾಚಾರ್ಯರು ಮಹಾವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net