ಬಿಸಿಜಿ ಲಸಿಕೆಗಿದೆ ಶತಮಾನದ ಇತಿಹಾಸ

SIDDAPURA LASIKA ABHIYANA
Published on

ಸಿದ್ದಾಪುರ: ನೂರು ವರ್ಷ ಇತಿಹಾಸ ಹೊಂದಿರುವ ಬಿಸಿಜಿ ಲಸಿಕೆಯು ಕ್ಷಯ ರೋಗ ತಡೆಯುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ಹೊಂದಿದೆ ಎಂದು ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ರಶ್ಮಿ ಹಿರೇಮಠ ಹೇಳಿದರು.

ತಾಲೂಕಿನ ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ನಡೆದ ವಯಸ್ಕರ ಬಿಸಿಜಿ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಟಿಬಿ ವಿರುದ್ಧ ಹೋರಾಡಲು ಮತ್ತು ಟಿಬಿಮುಕ್ತ ಭಾರತವನ್ನು ಮಾಡಲು ಬಿಸಿಜಿ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಿದೆ. ಟಿಬಿ ವಿರುದ್ಧ ಹೋರಾಡಲು ಬಿಸಿಜಿ ಲಸಿಕೆ ತುಂಬಾ ಉಪಯುಕ್ತ ಮತ್ತು ಸುರಕ್ಷಿತ ಲಸಿಕೆ ಆಗಿದೆ. ಹುಟ್ಟಿದ ಮಗುವಿಗೆ ಕೊಡುವ ಬಿಸಿಜಿ ಲಸಿಕೆ ಈಗ ವಯಸ್ಕರ ಮತ್ತು ಹೈ ರಿಸ್ಕ್ ಇರುವವರಿಗೆ ಕೊಡಲಾಗುತ್ತಿದೆ.

8 ವರ್ಷ ಮೇಲ್ಪಟ್ಟ ಟಿಬಿ ಕಾಯಿಲೆಯಿಂದ ಗುಣಮುಖರಾದವರು, ಟಿಬಿ ಇರುವ ವ್ಯಕ್ತಿಯ ನಿಕಟ ಸಂರ್ಪತರು, ಅಪೌಷ್ಠಿಕ ವ್ಯಕ್ತಿಗಳು, ಮಧುಮೇಹ ಹೊಂದಿರುವ ವ್ಯಕ್ತಿಗಳು, ಧೂಮಪಾನಿಗಳು, 60ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಿಸಿಜಿ ಲಸಿಕೆ ಕೊಡಲಾಗುತ್ತಿದೆ. ಈ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡಲಾಗುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ನರ್ಸಿಂಗ್ ಅಧಿಕಾರಿ ಉಮಾಬಾಯಿ ನಾಯ್ಕ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶೀಲಾ ನಾಯ್ಕ, ತನ್ವಿರುನ್ನಿಸ ಶೇಖ್, ಹೇಮಲತಾ ನಾಯ್ಕ, ರಾಘವೇಂದ್ರ ದೇವಾಡಿಗ, ಸಮುದಾಯ ಆರೋಗ್ಯಾಧಿಕಾರಿ ರಶ್ಮಿ ಶೆಟ್ಟಿ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net