

ಕಮತಗಿ : ಕ್ಷಯರೋಗ ನಿರ್ಮೂಲನೆಗೆ ಬಿಸಿಜಿ ಲಸಿಕೆ ಅಗತ್ಯವಾಗಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎ್. ಮಾಯಾಚಾರಿ ಹೇಳಿದರು.
ಗ್ರಾಮದ ನೇಕಾರ ಪೇಟೆಯ ಶಿರೂರ ಬನಶಂಕರಿ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಯಸ್ಕರ ಬಿಸಿಜಿ ಲಸಿಕಾಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷಯ ರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ರೋಗ ಬಂದ ಮೇಲೆ ಎಚ್ಚರಿಕೆ ವಹಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಅವಶ್ಯವಾಗಿದೆ. ಆ ಹಿನ್ನೆಲೆಯಲ್ಲಿ ಬಿಸಿಜಿ ಲಸಿಕೆ ಹಾಕಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
ಕ್ಷಯ ರೋಗ ಹಿನ್ನೆಲೆ ಹೊಂದಿರುವವರು, 60 ವರ್ಷ ಮೇಲ್ಪಟ್ಟವರು, ಮಧುಮೇಹ, ಧೂಮಪಾನ ಮಾಡುವ ವ್ಯಕ್ತಿಗಳು ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಎಸ್.ಎಸ್. ಮೆಣಸಿನ ಮಾತನಾಡಿದರು. ಅರ್ಹ ಲಾನುಭವಿಗಳಿಗೆ ಬಿಸಿಜಿ ಲಸಿಕೆ ನೀಡಲಾಯಿತು.
ಕೇಮ್ಮಣ್ಣ ಹುಲ್ಯಾಳ, ಆಶಾ ಕಾರ್ಯಕರ್ತೆ ಪವಾಡವ್ವ ಗಾಣಿಗೇರ, ಲಕ್ಷ್ಮೀ ಗೌಡರ, ವಿಶಾಲಾಕ್ಷಿ ಇಲ್ಯಾಳಮಠ, ಸುಮಾ ಗಾಳಿ, ಲಕ್ಷ್ಮೀ ಕೋಟೆಕಲ್ಲ ಮತ್ತಿತರರಿದ್ದರು.