

ಶಿವಮೊಗ್ಗ: ಕುವೆಂಪು ವಿವಿಯು ಬಿಸಿಎ 5 ಮತ್ತು 6ನೇ ಸೆಮಿಸ್ಟರ್‌ಳ ಪರೀಕ್ಷೆ ಮುಗಿದ 48 ತಾಸಿನಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಗಮನಸೆಳೆದಿದೆ. ಈ ಹಿಂದೆಯೂ ತ್ವರಿತ ಫಲಿತಾಂಶ ಪ್ರಕಟಿಸಿದ್ದ ವಿವಿ ಈಗ ಮತ್ತೊಂದು ಸಾಧನೆ ಮಾಡಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳ ಪೋರ್ಟಲ್‌ನಲ್ಲೂ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಮೊಬೈಲ್‌ಗೂ ಸಂದೇಶದ ಮೂಲಕ ಫಲಿತಾಂಶ ತಿಳಿಸಲಾಗಿದೆ. ಸೆ.12ರಂದು ನಡೆದಿದ್ದ ಪರೀಕ್ಷೆ ಫಲಿತಾಂಶವನ್ನು 14ರಂದೇ ಪ್ರಕಟಿಸಲು ವಿವಿಯ ಪರೀಕ್ಷಾಂಗ ವಿಭಾಗದ ಸಿಬ್ಬಂದಿ, ಬೋಧಕ ವರ್ಗ ಸಾಕಷ್ಟು ಶ್ರಮಿಸಿದೆ. ತ್ವರಿತವಾಗಿ ಫಲಿತಾಂಶ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ, ಉದ್ಯೋಗಕ್ಕೆ ಅನುಕೂಲವಾಗಿದೆ. ಇದೊಂದು ಶೈಕ್ಷಣಿಕ ದಾಖಲೆಯೂ ಹೌದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್ ತಿಳಿಸಿದ್ದಾರೆ.