ಬಿ.ಸಿ.ಸುರೇಶ್ ಡಿಎಸ್‌ಎಸ್ ಜಿಲ್ಲಾ ಸಂಚಾಲಕ

12 kdr 2
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಆರ್.ಪಾಂಡುರಂಗ ಬಣ)ದ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾದ ಬಿ.ಸಿ.ಸುರೇಶ್ ಅವರನ್ನು ಕೃಷ್ಣಪ್ಪ ಅಭಿನಂದಿಸಿದರು. ಸಚಿನ್, ಲೋಕೇಶ್, ಮನು, ಶ್ರೀನಿವಾಸ್ ಇದ್ದರು.
Published on

ಕಡೂರು: ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಆರ್.ಪಾಂಡುರಂಗ ಬಣ)ದ ಜಿಲ್ಲಾ ಸಂಚಾಲಕರಾಗಿ ಬಿ.ಸಿ.ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಂ ಸಚಿನ್, ಕೆ.ಆರ್.ಪ್ರಕಾಶ್, ಟಿ.ಸತ್ಯನಾರಾಯಣ(ಜಿಲ್ಲಾ ಸಂಘಟನಾ ಸಂಚಾಲಕ), ಮೇಲನಹಳ್ಳಿ ಲೋಕೇಶ್(ತಾಲೂಕು ಪ್ರಧಾನ ಸಂಚಾಲಕ), ಮೇಲಿನಹಳ್ಳಿ ಓಂಕಾರಪ್ಪ, ಕೆ.ಎಚ್.ಗಣೇಶ್, ಎಂ.ಎಚ್.ಶ್ರೀನಿವಾಸ್ (ತಾಲೂಕು ಸಂಘಟನಾ ಸಂಚಾಲಕ)ರಾಗಿ ಆಯ್ಕೆ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ಸಂಘಟನೆಯೊಂದಿಗೆ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು. ಸಮಿತಿ ಮುಖಂಡರಾದ ಪ್ರಕಾಶ್, ರಾಜು, ಎಸ್.ವಿಷ್ಣು.ಕೆ.ಎಸ್.ಮನು, ಉಮೇಶ್, ಟಿ.ಮಂಜುನಾಥ್, ರಾಜಪ್ಪ, ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net