ನ.30ರಂದು ಬಿ.ಸಿ ರೋಡ್ ಸ್ಪರ್ಶ ಕಲಾಮಂದಿರದಲ್ಲಿ ಕಲಾ ಪರ್ವ- 2023

dance
Published on


ಬಂಟ್ವಾಳ: ಗುರು ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಭರತನಾಟ್ಯ ಸಂಸ್ಥೆಯ ಸಹಯೋಗದಲ್ಲಿ ಡ್ಯಾನ್ಸ್ ಫೌಂಡೇಶನ್‌ನ ಕಲ್ಲಡ್ಕ ಮತ್ತು ಬಿ.ಸಿ.ರೋಡ್ ಶಾಖೆಗಳ ವಿದ್ಯಾರ್ಥಿಗಳಿಂದ ಕಲಾ ಪರ್ವ- 2023 ಕಾರ್ಯಕ್ರಮ ನ.30ರಂದು ಬಿ.ಸಿ ರೋಡ್ ಸಮೀಪದ ಸ್ಪರ್ಶ ಕಲಾಮಂದಿರದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ.


ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಇವರು ಕಾರ್ಯಕ್ರಮ ಉದ್ಘಾಟಿಸಲಿರುವರು. ಪತ್ರಕರ್ತರಾದ ಹರೀಶ್ ಮಾಂಬಾಡಿ ಇವರು ಪಾಲ್ಗೊಳ್ಳಲಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ವಿದುಷಿ ವಿದ್ಯಾ ಮನೋಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net