

ಬೆಂಗಳೂರು: ದೇಶಾದ್ಯಂತ ಕೈಗೊಂಡಿರುವ ಸ್ವಚ್ಛ ಸರ್ವೇಕ್ಷಣ್ - 2024 ಅಭಿಯಾನವನ್ನು ಬೆಂಗಳೂರು ನಗರದಲ್ಲೂ ಆರಂಭಿಸಲಿದ್ದು, ಫೆ.15ರಿಂದ ಮಾ.31ರ ವರೆಗೆ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.
ಸ್ವಚ್ಛ ಸರ್ವೇಕ್ಷಣೆಯ ಪ್ರಮುಖ ಅಂಶವೆಂದರೆ ನಗರದಲ್ಲಿ ಮತ್ತು ನೆರೆಹೊರೆಯಲ್ಲಿ ಸ್ವಚ್ಛತೆ ಸಾಧಿಸುವಲ್ಲಿ ನಗರವು ಸಾಧಿಸಿದ ಪ್ರಗತಿಯ ಕುರಿತು ಪ್ರತಿಕ್ರಿಯೆ ಪಡೆಯುವುದಾಗಿದೆ. ಪ್ರಸ್ತುತ ಸಾಲಿನ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಗೆ ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ವೆಬ್ ಲಿಂಕ್ ಹಾಗೂ ಮೊಬೈಲ್ ಅಫ್ಲಿಕೇಶನ್ ಲಿಂಕ್ ಮೂಲಕ ನಗರದ ಎಲ್ಲ ಸಾರ್ವಜನಿಕರು ತಮ್ಮ ಸಲಹೆ ನೀಡಬಹುದಾಗಿದೆ.
ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿದೆ. ಎಲ್ಲ ಸಾರ್ವಜನಿಕರು ಸ್ವಚ್ಚತೆಯ ಸಮೀಕ್ಷೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಅಭಿಯಾನದ ನೋಡಲ್ ಅಧಿಕಾರಿಯಾದ ಡಾ. ಕೆ.ಹರೀಶ್‌ಕುಮಾರ್ ವಿನಂತಿಸಿದ್ದಾರೆ.