

ಸಮಾರಂಭಗಳಿಗೆ ವಿಶೇಷ ತೆರಿಗೆ: ಪಾಲಿಕೆ ವ್ಯಾಪ್ತಿಯ ಯಾವುದೇ ಹೋಟೆಲ್, ಸಮುದಾಯ ಭವನ, ಕಟ್ಟಡ, ನಿವೇಶನಗಳಲ್ಲಿ ಕನಿಷ್ಠ ಒಂದು ವಾರಕ್ಕಿಂತ ಮೇಲ್ಪಟ್ಟು ನಡೆಯುವ ವಸ್ತುಪ್ರದರ್ಶನ, ಮನೋರಂಜನಾ ಕಾರ್ಯಕ್ರಮ, ಮದುವೆ ಸಮಾರಂಭಗಳಿಂದ ಉಂಟಾಗುವ ತ್ಯಾಜ್ಯಕ್ಕೆ ಪ್ರತ್ಯೇಕ ಕರ ವಿಧಿಸಲಾಗುತ್ತದೆ. ಒಂದು ವಾರಕ್ಕೆ 1,500 ರೂ., ಹಾಗೂ ತಿಂಗಳ ಅವಧಿಗೆ 3 ಸಾವಿರ ರೂ., ಒಂದು ತಿಂಗಳಿಗಿಂತ ಮೇಲ್ಪಟ್ಟರೆ 6 ಸಾವಿರ ರೂ. ತ್ಯಾಜ್ಯ ಕರ ಪಾವತಿಸಬೇಕು. ಸರ್ಕಾರಿ ಪ್ರಾಯೋಜಕತ್ವವಿಲ್ಲದ ಕಾರ್ಯಕ್ರಮಗಳಿಗೆ ಮರುಪಾವತಿಸಬಹುದಾದ ಸ್ವಚ್ಛತಾ ಠೇವಣಿಯನ್ನು ಆಯೋಜಕರು ಪಾಲಿಕೆಗೆ ಪಾವತಿಸಬೇಕು.
ಎಸ್ಕ್ರೋ ಖಾತೆಗೆ ದಂಡದ ಹಣ: ಬಿಬಿಎಂಪಿ ಘನತ್ಯಾಜ್ಯ ಉಪನಿಯಮ ಮೀರಿದವರಿಗೆ ಆರೋಗ್ಯ ಇಲಾಖೆ ಹಿರಿಯ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ಗಳು, ವಾರ್ಡ್ವುಟ್ಟದ ನೋಡಲ್ ಅಧಿಕಾರಿ, ಅಧೀಕ್ಷಕ ಇಂಜಿನಿಯರ್ಗಳು ದಂಡ ವಿಧಿಸಬಹುದಾಗಿದೆ. 5 ಲಕ್ಷ ರೂ.ಗಳಿಗೂ ಅಧಿಕ ದಂಡ ವಿಧಿಸಿದಲ್ಲಿ ಮೇಲ್ಮನವಿ ವಿಚಾರಣೆಯನ್ನು ಆಯಾ ವಲಯದ ಜಂಟಿ ಆಯುಕ್ತರು ಕೈಗೊಂಡು ಏಳು ದಿನಗಳ ಒಳಗಾಗಿ ತೀರ್ಮಾನ ಪ್ರಕಟಿಸಬೇಕು. ದಂಡ ಮೊತ್ತವನ್ನು ಘನತ್ಯಾಜ್ಯ ನಿರ್ವಹಣೆಗಾಗಿ ತೆರೆಯಲಾಗಿರುವ ಸೀಮಿತ ಬ್ಯಾಂಕ್ ಖಾತೆಗ (ಎಸ್ಕ್ರೋ ಬ್ಯಾಂಕ್ ಖಾತೆ) ವರ್ಗಾಯಿಸಬೇಕು. ಈ ಹಣವನ್ನು ತ್ಯಾಜ್ಯ ನಿರ್ವಹಣೆ, ಸ್ವಚ್ಛತಾ ಕಾರ್ವಿುಕರ ವೇತನ, ಪ್ರೋತ್ಸಾಹಧನಕ್ಕೆ ಮಾತ್ರ ಬಳಸಬೇಕು.