ಬಿಬಿಎಂಪಿ ವಾರ್ಡ್ ನೋಡಲ್ ಅಧಿಕಾರಿಗಳ ನೇಮಕ

BBMP
Published on

* ವಾರದಲ್ಲಿ 3 ದಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ * ತಿಂಗಳಲ್ಲಿ 2 ಬಾರಿ ವಾರ್ಡ್ ಸಮಿತಿ ಸಭೆ

ಬೆಂಗಳೂರು: ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಜನರ ಸಮಸ್ಯೆ ಆಲಿಸಲು ಅನುಕೂಲವಾಗುವಂತೆ 198 ವಾರ್ಡ್​ಗಳಿಗೆ 197 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸ್ಥಳೀಯವಾಗಿ ವಾಸವಾಗಿರುವ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ವಿಶೇಷ ಆಯುಕ್ತರಿಗೆ ಹಂಚಿಕೆ ಮಾಡಲಾದ ವಾರ್ಡ್​ಗಳು ಹುದ್ದೆ                    ಹೆಸರು                    ನಗರ ಆಯುಕ್ತರು         ಮಂಜುನಾಥಪ್ರಸಾದ್        ವಸಂತನಗರ ವಿಶೇಷ ಆಯುಕ್ತ       ಡಿ. ರಂದೀಪ್      ಸಿ.ವಿ.ರಾಮನ್ ನಗರ ವಿಶೇಷ ಆಯಕ್ತ   ಬಸವರಾಜ್  ರಾಧಾಕೃಷ್ಣ ದೇವಸ್ಥಾನ ವಾರ್ಡ್ ವಿಶೇಷ ಆಯುಕ್ತ    ಜಿ. ಮಂಜುನಾಥ್             ಮಲ್ಲೇಶ್ವರ ವಿಶೇಷ ಆಯುಕ್ತ      ಎಸ್.ಜಿ. ರವೀಂದ್ರ        ಜೆ.ಸಿ. ನಗರ ವಿಶೇಷ ಆಯುಕ್ತ     ರಾಜೇಂದ್ರ ಚೋಳನ್  ಓಕಳಿಪುರ ಮತ್ತು ವರ್ತೂರು ಜಂಟಿ ಆಯುಕ್ತ       ಸರ್ಫರಾಜ್ ಖಾನ್            ಹಲಸೂರು

ಅಧಿಕಾರಿಗಳ ಕಾರ್ಯಗಳೇನು?: ನೋಡಲ್ ಅಧಿಕಾರಿಗಳು ಸ್ಥಳೀಯವಾಗಿ ತಮ್ಮ ವ್ಯಾಪ್ತಿಯಲ್ಲಿನ ಜನರ ಸಮಸ್ಯೆ ಆಲಿಸಬೇಕು. ವಾರದಲ್ಲಿ 3 ದಿನ ಬೆಳಗ್ಗೆ ಪೌರಕಾರ್ವಿುಕರ ಮಸ್ಟರಿಂಗ್ ಕೇಂದ್ರಕ್ಕೆ ಬೇಟಿ ಮಾಡಿ ಕಸ ವಿಲೇವಾರಿ ಮತ್ತು ಕಸ ವಿಂಗಡಣೆ ಬಗ್ಗೆ ಪರಿಶೀಲಿಸಬೇಕು. ಕಸ ವಿಂಗಡಿಸದಿರುವವರಿಗೆ ದಂಡ ವಿಧಿಸಲು ಸೂಚಿಸಬೇಕು. ತೆರಿಗೆ ವಸೂಲಿ, ಮಳೆ ಹಾನಿ ಪ್ರದೇಶ, ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಜತೆಗೆ, ಸಾರ್ವಜನಿಕರ ದೂರುಗಳನ್ನು ಆಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು.

ವಾರ್ಡ್ ಮಟ್ಟದ ಸಮಿತಿ: ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ವಾರ್ಡ್​ಗಳಲ್ಲಿ ಸ್ಥಳೀಯರು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ವಿವಿಧ ಸಂಘಟನೆ ಮತ್ತು ಪಕ್ಷಗಳ ಸದಸ್ಯರನ್ನು ಒಳಗೊಂಡ ವಾರ್ಡ್ ಮಟ್ಟದ ಸಮಿತಿ ರಚಿಸಿಕೊಳ್ಳಬೇಕು. ಸಮಿತಿಗೆ ಆಯಾ ವಾರ್ಡ್​ನ ಸಹಾಯಕ ಇಂಜಿನಿಯರ್ ಕಾರ್ಯದರ್ಶಿ ಆಗಿರುತ್ತಾರೆ. ಜತೆಗೆ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಕುಂದು-ಕೊರತೆ ಸಭೆ ಆಯೋಜಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net