ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ವರ್ಗಾವಣೆ

rampura
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಜಯರಾಮ್ ರಾಯಪುರ ಸ್ಥಾನಕ್ಕೆ ಮತ್ತೊಬ್ಬ ಐಆರ್‌ಎಸ್ ಅಧಿಕಾರಿ ಶಿವಾನಂದ ಕಲಕೇರಿ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ಶಿವಾನಂದ ಅವರು ಸಕ್ಕರೆ ನಿರ್ದೇಶಕರು ಹಾಗೂ ಕಬ್ಬು ಅಭಿವೃದ್ಧಿ ಮಂಡಳಿಯ ವಿಶೇಷ ಆಯುಕ್ತರಾಗಿದ್ದಾರೆ. ವರ್ಗಾವಣೆಗೊಂಡಿರುವ ಜಯರಾಮ್ ರಾಯಪುರಗೆ ಹೊಸ ಹುದ್ದೆಯನ್ನು ತೋರಿಸಿಲ್ಲ. ಅವರು ಬೆಂಗಳೂರು ಬ್ರ್ಯಾಂಡ್‌ನ ನೋಡಲ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಬಿಬಿಎಂಪಿಯ ಪಶ್ಚಿಮ ವಲಯದ ವಲಯಾಧಿಕಾರಿಯಾಗಿರುವ ಡಾ.ದೀಪಕ್ ಆರ್.ಎಲ್. ಅವರನ್ನು ಪಾಲಿಕೆಯ ವಿಶೇಷ ಆಯುಕ್ತ (ಕಂದಾಯ) ಹುದ್ದೆಗೆ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net