ಆಸ್ತಿ ತೆರಿಗೆ ಪಾವತಿಗೆ ಶಿಕ್ಷಣ ಸಂಸ್ಥೆಗಳ ಮೇಲೆ ಬಿಬಿಎಂಪಿ ಗದಾಪ್ರಹಾರ: ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸುವುದಾಗಿ ಕ್ಯಾಮ್ಸ್ ಎಚ್ಚರಿಕೆ

bbmp transfer
Published on

ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಿದ್ಯಾಸಂಸ್ಥೆಗಳ ಕಟ್ಟಡಗಳ ಮೇಲೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ವಸೂಲಾತಿಗಾಗಿ ಬಿಬಿಎಂಪಿ-ಕಾಯ್ದೆ-2020ರಲ್ಲಿ ಪ್ರತ್ಯೇಕವಾಗಿ ಜಾರಿಗೊಳಿಸುವ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಹೀಗೆ ಮುಂದುವರಿದರೆ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಕ್ಕೂಟ (ಕ್ಯಾಮ್ಸ್) ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ವಿದ್ಯಾಸಂಸ್ಥೆಗಳ ಕಟ್ಟಡಗಳಿಂದ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ವಸೂಲಾತಿಗಾಗಿ ಬಿಬಿಎಂಪಿ-2020ರಲ್ಲಿ ಪ್ರತ್ಯೇಕವಾಗಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. 2021-22ನೇ ಸಾಲಿನಿಂದ ಕೆಎಂಸಿ ಕಾಯ್ದೆಯನ್ನು 1976 ಕಲಂ 110 (1) (ಐ)(ಬಿ)ರ ಅಡಿಯಲ್ಲಿ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿಗೆ ಅನುಮೋದನೆ ಪಡೆಯಾಗಿದೆ. ಸೇವಾ ಶುಲ್ಕವನ್ನು ಪಾವತಿಸುತ್ತಿರುವ ಸ್ವತ್ತುಗಳಿಂದ ಪೂರ್ಣ ಪ್ರಮಾಣದ ಆಸ್ತಿ ತೆರಿಗೆಯನ್ನು ಕಟ್ಟುವಂತೆ ಸುತ್ತೋಲೆ ಹೊರಡಿಸಬೇಕು. ನಂತರ ಅದರಂತೆ ವಿನಾಯಿತಿ ಪಡೆಯುತ್ತಿರುವ ವಿದ್ಯಾಸಂಸ್ಥೆಗಳಿಂದ ಪೂರ್ಣ ಪ್ರಮಾಣದ ತೆರಿಗೆ ಕಟ್ಟುವಂತೆ ತಿಳಿವಳಿಕೆ ಪತ್ರಗಳನ್ನು ನೀಡಲಾಗಿತ್ತು.

ಈ ವಿಚಾರವಾಗಿ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ಆಸ್ತಿ ತೆರಿಗೆ ರಿಯಾಯಿತಿ ನೀಡಲಾಗಿದೆ. ತಿದ್ದುಪಡಿ ನಂತರ ಪ್ರತ್ಯೇಕವಾಗಿ ಹೊರಡಿಸಿದಂತಹ ತೆರಿಗೆ ಕಟ್ಟಲು ತಿಳಿವಳಿಕೆ ಪತ್ರವನ್ನು ಕೂಡ ವಜಾಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದ ಶೇ.100 ತೆರಿಗೆ ಕಟ್ಟಿದ್ದಲ್ಲಿಯೂ ಅದನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಲು ಪ್ರತ್ಯೇಕವಾಗಿ ಆದೇಶ ಮಾಡಲಾಗಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ತಕ್ಷಣ ತಂತ್ರಾಂಶದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಪ್ತತ್ಯೇಕವಾಗಿ ಆಸ್ತಿ ತೆರಿಗೆ ಶೇ.25 ರಷ್ಟು ಕಟ್ಟಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳು ಶೇ.100 ಆಸ್ತಿ ತೆರಿಗೆ ಪಾವತಿಸುವಂತೆ ದೌರ್ಜನ್ಯ ಎಸಗಲಾಗುತ್ತಿದೆ. ನ್ಯಾಯಾಲಯದ ತೀರ್ಪು ಆದೇಶ ರದ್ದಾಗಿದ್ದರೂ ಒತ್ತಾಯಪೂರ್ವಕವಾಗಿ ಕಟ್ಟಿಸಿಕೊಳ್ಳಲು ಮುಂದಾಗಿದೆ. ಈ ವಿಚಾರವಾಗಿ ಡಿಸಿಎಂ ನಿರ್ದೇಶನದ ಹೊರತಾಗಿಯೂ ವಸೂಲಿ ಮಾಡುತ್ತಿದೆ. - ಡಿ. ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net