ಬಿಬಿಎಂಪಿ ತಪಾಸಣೆ: ಬೆಂಗಳೂರಿನ 10 ರೆಸ್ಟೋರೆಂಟ್‌ ಬಂದ್​

bbmp building
Published on

ಬೆಂಗಳೂರು: ಕಳೆದ ಮೂರು ದಿನಗಳಿಂದ ಬಿಬಿಎಂಪಿ ಅಧಿಕಾರಿಗಳು ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ಮಾಡುತ್ತಿದ್ದಾರೆ. ಜೆಪಿ ನಗರದ ಒಂದು ಮೇಲ್ಛಾವಣಿಯ ರೆಸ್ಟೋರೆಂಟ್ ಸೇರಿದಂತೆ 10 ಸಂಸ್ಥೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮುಚ್ಚಿದ್ದಾರೆ.

ಅಕ್ಟೋಬರ್​ 18 ರಂದು ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಡ್​ಪೈಪ್ ಹುಕ್ಕಾ ಕೆಫೆ ಆರನೇ ಮಹಡಿಯಲ್ಲಿ 8 ರಿಂದ10 ಸಿಲಿಂಡರ್​ಗಳು ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ಮತ್ತು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕೆಫೆ ಮಾಲೀಕರಿಗೆ ಆಹಾರ ಪೂರೈಸಲು ಮಾತ್ರ ಪರವಾನಗಿ ನೀಡಲಾಗಿತ್ತು, ಆದರೆ ಅವರು ಗ್ರಾಹಕರಿಗೆ ಅಕ್ರಮವಾಗಿ ಹುಕ್ಕಾ ನೀಡುತ್ತಿರುವುದು ಕಂಡುಬಂದಿತ್ತು. ಈ​ ಕೆಫೆಯಲ್ಲಿ ಅಗ್ನಿ ದುರಂತ ಸಂಭವಿಸಿದ ನಂತರ ಅಲರ್ಟ್ ಆದ ಬಿಬಿಎಂಪಿ ಅಧಿಕಾರಿಗಳು ನರದಲ್ಲಿರುವ  ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆಗೆ ಮುಂದಾಗಿದ್ದಾರೆ.

ಬಿಬಿಎಂಪಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಿದೆ. ಇದರಲ್ಲಿ ಇದುವರೆಗೆ 669 ಉದ್ದಮೆಗಳನ್ನು ತಪಾಸಣೆ ನಡೆಸಲಾಗಿದೆ. 157 ಉದ್ದಿಮೆಗಳು ಟ್ರೇಡ್ ಲೈಸೆನ್ಸ್ ಷರತ್ತುಗಳ ನಿಯಮಗಳನ್ನು ಉಲ್ಲಂಘನೆ ಮಾಡಿವೆ.

ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ, 74 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ. ಇಲ್ಲಿಯವರೆಗೆ ನೀಡಲಾದ ಒಟ್ಟು ನೋಟಿಸ್‌ಗಳ ಸಂಖ್ಯೆ 327ಕ್ಕೆ ತಲುಪಿದೆ.  ನೋಟಿಸ್ ಪಡೆದಿರುವ ಸಂಸ್ಥೆಗಳು ಬಿಬಿಎಂಪಿ ಅಧಿಕಾರಿಗಳು ಸೂಚಿಸಿರುವ ಬದಲಾವಣೆಗಳನ್ನು ಪಾಲಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net