

ಬೆಂಗಳೂರು: ಬಿಬಿಎಂಪಿ ಅರಣ್ಯ ವಿಭಾಗದಿಂದ ನಗರದ ಕೆರೆ, ಉದ್ಯಾನ ಹಾಗೂ ಇತರ ಪ್ರದೇಶಗಳಲ್ಲಿ ಸಸಿ ನೆಡುವಿಕೆ ಸಪ್ತಾಹದಲ್ಲಿ 19,850 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ನಗರ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಆಯಾ ವಲಯಗಳಲ್ಲಿ ಮಂಗಳವಾರ (ಆ.6) ಚಾಲನೆ ಸಿಗಲಿದೆ. ಅರಣ್ಯ ಘಟಕದ ವತಿಯಿಂದ ಸಸಿಗಳು, ವೃಕ್ಷ ಕವಚಗಳನ್ನು ಒದಗಿಸಿ ಗಿಡ ನೆಡಲು ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಮಕ್ಕಳ ಜತೆಗೂಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಕಾಳಜಿ ವಹಿಸಬೇಕು. ಹಸಿರು ರಕ್ಷಕ ತಂತ್ರಾಂಶದ ಮೂಲಕ ನೊಂದಾಯಿಸಿಕೊಂಡು ಗಿಡಗಳ ಪೋಷಣೆಗೆ ನಿರಂತರವಾಗಿ ಪಾಲ್ಗೊಳ್ಳಬಹುದು ಎಂದು ಪಾಲಿಕೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ. ಸ್ವಾಮಿ ತಿಳಿಸಿದ್ದಾರೆ.
ಆಸ್ತಕರು ನೋಂದಣಿ ಮಾಡಿಕೊಳ್ಳಿ:
ಪಾಲಿಕೆ ವ್ಯಾಪ್ತಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶೈಕ್ಷಣಿಕ ಸಂಸ್ಥೆಗಳು, ಲೇಕ್ ಗ್ರೂಪ್ಸ್, ಸಾರ್ವಜನಿಕರು ಸೇರಿ ಇನ್ನಿತರರು ಬಿಬಿಎಂಪಿ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಐದೂ ವಲಯಗಳಲ್ಲಿ ಸಸಿಗಳನ್ನು ನಡೆಲು ಯೋಜನೆ ರೂಪಿಸಿದ್ದು, ಆಸಕ್ತರು ವಲಯ ಅರಣ್ಯ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.
ಸಸಿ ನೆಡುವಿಕೆಗೆ ನೋಂದಾಯಿಸಲು ವಿವರ:
ವಲಯದ ಹೆಸರು ಅಧಿಕಾರಿ ಮೊ.ಸಂ
ಯಲಹಂಕ ಮಹೇಶ್ 7019196107
ಮಹದೇವಪುರ ಪುಷ್ಪಾ 9480685541
ಬೊಮ್ಮನಹಳ್ಳಿ ನರೇಂದ್ರ 9480685399
ಆರ್.ಆರ್.ನಗರ ಕೃಷ್ಣಾ 776055345
ದಾಸರಹಳ್ಳಿ ರಾಜಪ್ಪ 9448234928
ವಲಯವಾರು ಸಸಿ ನೆಡುವ ವಿವರ:
ವಲಯ ಸಸಿಗಳ ಸಂಖ್ಯೆ
ಯಲಹಂಕ 5,450
ಮಹದೇವಪುರ 4,800
ಬೊಮ್ಮನಹಳ್ಳಿ 4,000
ಆರ್.ಆರ್.ನಗರ 1,600
ದಾಸರಹಳ್ಳಿ 4,000
ಒಟ್ಟು ಸಸಿಗಳು 19,850