

ಬೆಂಗಳೂರು: ಮಹಾನಗರದಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ನಿಯಮಾವಳಿ ಉಲ್ಲಂಘನೆ ಪ್ರಕರಣದ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸುವಂತೆ ಕೋರಿ ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಅನಧಿಕೃತ ಕಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ನೀಡದಂತೆ ಬೆಸ್ಕಾಂ ನಿರ್ಧಾರ ಕೈಗೊಂಡ ಬಳಿಕ ನಗರದ ಬಹುತೇಕ ಕಡೆಗಳಲ್ಲಿ ಇಂತಹ ಬಿಲ್ಡಿಂಗ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವುದು ಸಾಧ್ಯವಾಗುತ್ತಿಲ್ಲ. ಕಳೆದ ಡಿಸೆಂಬರ್‌ನಲ್ಲೇ ಸುಪ್ರೀಂಕೋರ್ಟ್ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಕಡಿತ ಮಾಡಬಹುದು. ನಿಯಮ ಉಲ್ಲಂಸಿದ್ದಲ್ಲಿ ನಿರ್ಮಾಣ ಹಂತದ ಕಟ್ಟಡಗಳಿಗೆ ನೀಡಿರುವ ತಾತ್ಕಾಲಿಕ ಸಂಪರ್ಕವನ್ನೂ ಕಟ್ ಮಾಬಹುದು ಎಂದು ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಕಳೆದ ಜನವರಿಯಲ್ಲಿ ಬಿಬಿಎಂಪಿಯು ನಿಯಮ ಉಲ್ಲಂಸಿರುವ ಬಿಲ್ಡಿಂಗ್‌ಗಳಿಗೆ ವಿದ್ಯುತ್ ಕಡಿತ ಮಾಡಬಹುದು. ಜತೆಗೆ ನೀರಿನ ಸಂಪರ್ಕವನ್ನು ಕಡಿತ ಮಾಡಬಹುದು ಎಂದು ಕ್ರಮವಾಗಿ ಬೆಸ್ಕಾಂ ಮತ್ತು ಜಲಮಂಡಳಿಗೆ ಪತ್ರ ಬರೆಯಲಾಗಿತ್ತು.
ಆ ಬಳಿಕ ಜಲಮಂಡಳಿ ಮೃಧು ಧೋರಣೆ ಕೈಗೊಂಡಿದ್ದರೆ, ಬೆಸ್ಕಾಂ ಇತ್ತೀಚಿಗಷ್ಟೇ ಅಧಿಕೃತ ಆದೇಶ ಹೊರಡಿಸಿ ವಿದ್ಯುತ್ ಸಂಪರ್ಕ ಕಡಿತಕ್ಕೆ ಕಠಿಣ ನಿಲುವು ಕೈಗೊಂಡಿದೆ. ಸರ್ಕಾರಿ ಸಂಸ್ಥೆಗಳ ಈ ತೀರ್ಮಾನದಿಂದಾಗಿ ಅರ್ಧಕ್ಕೆ ನಿಂತಿರುವ ಹಾಗೂ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ, ಬಿಲ್ಡಿಂಗ್ ಬೈಲಾ ಉಲ್ಲಂಸಿರುವ ಕಟ್ಟಡಗಳಿಗೆ ಒಸಿ ನೀಡಲು ಬಾರದು. ಇದರಿಂದ ಲಕ್ಷಾಂತರ ಸಂಖ್ಯೆಯ ಕಟ್ಟಡ ಮಾಲೀಕರಿಗೆ ತೊಂದರೆ ಆಗಲಿದೆ. ಈ ಮಾಹಿತಿ ಆಧರಿಸಿ ಬಿಲ್ಡಿಂಗ್ ಬೈಲಾ ಉಲ್ಲಂಸಿರುವ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸಿದ್ದಲ್ಲಿ ಜನರಿಗೆ ಅನುಕೂಲವಾಗಲಿದೆ. ಜತೆಗೆ ದಂಡ ವಸೂಲಾತಿಯಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂಬ ಲೆಕ್ಕಚಾರ ಅಧಿಕಾರಿ ಮಟ್ಟದಲ್ಲಿ ಆಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ಪ್ರಸ್ತಾವನೆ ಇದೇ ಮೊದಲಲ್ಲ . . .
ಕಟ್ಟಡ ನಿಯಮಾವಳಿ ಉಲ್ಲಂಸಿರುವ ಸ್ವತ್ತುಗಳಿಗೆ ದಂಡ ಕಟ್ಟಿಸಿಕೊಂಡು ಪರಿಹಾರ ಒದಗಿಸುವ ಸಂಬಂಧ ಈ ಹಿಂದೆ ಮುಖ್ಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು ಮೊದಲ ಬಾರಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ಮತ್ತೆ ಪಾಲಿಕೆಯು ಪ್ರಸ್ತಾವನೆ ಸಲ್ಲಿಸಿದ್ದು, ಪರಾಮರ್ಶೆ ನಡೆಸಿದ ಬಳಿಕ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುತ್ತದೆ. ಆರಂಭದಲ್ಲಿ ವಸತಿ ಪ್ರದೇಶಕ್ಕೆ ಸೀಮಿತಗೊಳಿಸಿ, ನಂತರ ವಾಣಿಜ್ಯ ಕಟಡ್ಟಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.