

ಬೆಂಗಳೂರು: ಬಿಬಿಎಂಪಿಯ ಹವಾಮಾನ ಕ್ರಿಯಾ ಕೋಶದಲ್ಲಿ (ಸಿಎಸಿ) ಹವಾಮಾನ ಬದಲಾವಣೆ ಹಾಗೂ ನಗರ ಆಡಳಿತ ಕುರಿತು ಆಸಕ್ತಿ ಹೊಂದಿರುವ ವೃತ್ತಿಪರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಫೆಲೋ- ಎಂಇಆರ್, ಹವಾಮಾನ ಆಯವ್ಯಯ ಮತ್ತು ಸಲಹೆಗಾರ - ‘ಸಂವಹನ ಮತ್ತು ಪ್ರಚಾರ’ ಈ ಎರಡು ಹುದ್ದೆಗಳ ಫೆಲೋ ಅವಧಿ 12 ತಿಂಗಳ ಆಗಿರುತ್ತದೆ. ಜತೆಗೆ ಗೌರವಧನವನ್ನೂ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಹವಾಮಾನ ಕ್ರಿಯಾ ಕೋಶ ತಂಡದೊಂದಿಗೆ ಕೆಲಸ ಮಾಡುವುದರ ಜತೆಗೆ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ (ಬಿಸಿಎಪಿ) ಜಾರಿಗೆ ಕೊಡುಗೆ ನೀಡಬಹುದಾಗಿದೆ.
ಆಸಕ್ತರು ಪಾಲಿಕೆ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ವಿವರವಾದ ಮಾಹಿತಿ ಮತ್ತು ಮಾರ್ಗಸೂಚಿಗೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏ.30, ಆಯ್ಕೆಯಾದ ಅಭ್ಯರ್ಥಿಗಳು ಮೇ 15ರಿಂದ ಕೆಲಸ ಆರಂಭಿಸಬಹುದಾಗಿದೆ ಎಂದು ಪಾಲಿಕೆಯ ಹವಾಮಾನ ಕ್ರಿಯಾ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ.