

ಬೆಂಗಳೂರು: ಬಿಬಿಎಂಪಿಯು ಇ-ಖಾತಾ ಸ್ಥಿತಿಗತಿಯನ್ನು ಆಧರಿಸಿ ನಾಗರಿಕರಿಗೆ ಸರಾಸರಿ ಎರಡು ದಿನಗಳಲ್ಲಿ ಸೌಲಭ್ಯ ನೀಡಲಾಗುತ್ತಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ದೈನಂದಿನ ಅರ್ಜಿ ವಿಲೇವಾರಿಯು ಪ್ರತಿನಿತ್ಯದ ಸ್ವೀಕೃತಿಯಂತೆಯೇ ಇರುತ್ತದೆ. ಬಾಕಿ ಇರುವ ಅರ್ಜಿಗಳು 2 ದಿನಗಳ ಸ್ವೀಕೃತಿ ಎಂಬುದನ್ನು ನಾಗರಿಕರು ಗಮನಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಅನುಮೋದನೆಗಾಗಿ ಕೆಲ ಕಾಲ ಕಾಯುವುದು ಅನಿವಾರ್ಯವೇ ಹೊರತು ದೀರ್ಘ ಸಮಯದವರೆಗೆ ಅಲ್ಲ. ಸ್ವಲ್ಪ ತಡವಾದರೂ, ತಕ್ಷಣವೇ ಪಾಲಿಕೆ ಕಚೇರಿಗೆ ಭೇಟಿ ನೀಡುವ ಅಗತ್ಯ ಇಲ್ಲ. ತುರ್ತು ನೆಪದಲ್ಲಿ ದಲ್ಲಾಳಿಗಳ ದಾಳಕ್ಕೆ ಅನಿವಾರ್ಯವಾಗಿ ಬಲಿಯಾಗಬೇಡಿ. ಇ-ಖಾತಾ ಅರ್ಜಿ ಸಲ್ಲಿಸಿದ ನಂತರ ಅದನ್ನು ಬೇಗನೆ ಅನುಮೋದಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ವ್ಯಕ್ತಿಗತ ಪ್ರಕರಣಗಳು ಮಾತ್ರ ವಿಳಂಬವಾಗಬಹುದು ಅಥವಾ ಕೆಲವು ಸಮಸ್ಯೆ ಎದುರಿಸಬಹುದು. ಅದಕ್ಕಾಗಿ ಹೆಲ್ಪ್ಡೆಸ್ಕ್ 9480683695 ನೊಂದಿಗೆ ಕರೆ ಮಾಡಿ ಮಾಹಿತಿ ನೀಡಿ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.