ಕಟ್ಟಡ ಪರವಾನಗಿ ನೀಡಲು ಸತಾಯಿಸುವ ಬಿಬಿಎಂಪಿ!

BNG
Published on

| ಎಸ್.ಎನ್. ಶಾಸ್ತ್ರಿ ಯಶವಂತಪುರ

ಬಿಬಿಎಂಪಿಯು ಕಟ್ಟಡ ನಿರ್ವಣಕ್ಕಾಗಿ ನಕ್ಷೆ ಪರವಾನಗಿ ಪಡೆಯುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಶೇ.25 ಶುಲ್ಕ ಹೆಚ್ಚಿಸಿತು. ಆದರೆ, ಶುಲ್ಕ ಪಡೆದ ಬಳಿಕ, ಕಟ್ಟಡ ನಿರ್ವಿುಸಲು ಸಕಾಲದಲ್ಲಿ ಪರವಾನಗಿ ನೀಡದೆ

ಸತಾಯಿಸುತ್ತಿದೆ. ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿರುವ ಯಶವಂತ ಪುರದ ಐದು ವಾರ್ಡ್​ಗಳಲ್ಲಿ ನೂರಾರು ಕಡತಗಳು ಬಾಕಿ ಉಳಿದಿದ್ದು, ಇವುಗಳ ವಿಲೇವಾರಿಗೆ ಪಾಲಿಕೆ ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಹೊಸ ನಿಯ ಮದ ಪ್ರಕಾರ, ಹಣ ಪಾವತಿಸಿದ ತಕ್ಷಣ ನಕ್ಷೆ ಮಂಜೂರು ಮಾಡಿ ಕೊಡಬೇಕಿದ್ದ ಪಾಲಿಕೆ ಅಧಿಕಾರಿಗಳು ತಿಂಗಳುಗಟ್ಟಲೆ ಕಾಯಿಸá-ತ್ತಿ ದ್ದಾರೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ತಂತ್ರಾಂಶದಲ್ಲಿನ ನ್ಯೂನತೆ ಮತ್ತಿತರ ಸಬೂಬುಗಳನ್ನು ಹೇಳುತ್ತಿದ್ದಾರೆ. ‘ಕೇಂದ್ರ ಕಛೇರಿಯಲ್ಲಿ ವಿಚಾರಿಸಿ’ ಎಂದು ಸಾಗಹಾಕುತ್ತಿದ್ದಾರೆ. ಜನರು ಕಚೇರಿಗೆ ಅಲೆ ಯುವುದನ್ನು ತಪ್ಪಿಸಲಿಕ್ಕಾಗಿಯೇ ಆನ್​ಲೈನ್ ಸೇವೆಗೆ ಮೊರೆಹೋದವರು, ಮತ್ತೆ ಹಳೇ ದಾರಿಯತ್ತಲೇ ಬೊಟ್ಟು ಮಾಡುತ್ತಿದ್ದಾರೆ!

ಕಟ್ಟಡ ನಿರ್ಮಾಣ ಪರವಾನಗಿ ಮಂಜೂರಾತಿಗೆ ಲಕ್ಷಾಂತರ ಶುಲ್ಕ ವಸೂಲಿ ಮಾಡುವ ಪಾಲಿಕೆ ಅನುಸರಿಸುತ್ತಿರುವ ವಿಳಂಬ ನೀತಿ ಯಿಂದ ಜನರು ಹಲವು ಸಮಸ್ಯೆಗಳಿಗೆ ಸಿಲá-ಕá-ತ್ತಿದ್ದಾರೆ. ಕಟ್ಟಡ ನಿರ್ವಿುಸಲು ಬ್ಯಾಂಕ್ ಸಾಲದ ಹೊರೆ ಒಂದೆಡೆಯಾದರೆ, ಪಾಲಿಕೆಯ ಉದಾಸೀನತೆ ಮತ್ತೊಂದೆಡೆ. ‘ಬಿಬಿಎಂಪಿಯಲ್ಲಿ ಹಣದ ಕೊರತೆ ಇದೆ ಎನ್ನುವ ಅಧಿಕಾರಿಗಳಿಗೆ ನಕ್ಷೆ ಮಂಜೂರಾತಿಯಿಂದ ಕೋಟ್ಯಂತರ ರೂ. ಆದಾಯ ಬರುವುದರ ಬಗ್ಗೆ ಗಮನವಿಲ್ಲವೇಕೆ? ಕಚೇರಿಗಳಿಗೆ ಭೇಟಿ ನೀಡಬೇಕು ಎನ ್ನುವುದಾದರೆ ಆನ್​ಲೈನ್ ವ್ಯವಸ್ಥೆ ಮಾಡಿದ್ದಾದರೂ ಯಾಕೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಕಾಲದಲ್ಲಿ ಹಣ ಪಾವತಿಸಿಲ್ಲ ಎಂಬ ಏಕೈಕ ಕಾರಣಕ್ಕೆ ಬಡ್ಡಿ ಹಾಕುವ ಪಾಲಿಕೆ, ಈಗಾಗಲೇ ಕಟ್ಟಡ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿ ಶುಲ್ಕ ವನ್ನು ಪಾವತಿಸಿ ತಿಂಗಳು ಗಳೇ ಕಳೆದರೂ ಸ್ಪಂದಿಸದೆ ನಮ್ಮನ್ನು ಸುಖಾಸುಮ್ಮನೆ ಅಲೆದಾಡಿ ಸುತ್ತಿದೆ. ಇದಕ್ಕೆಲ್ಲ ಯಾರು ಹೊಣೆ? | ಲಕ್ಷ್ಮೀಪತಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರು

ಅಧಿಕಾರಿಗಳ ಅಸಹಾಯಕತೆ ತಂತ್ರಾಂಶದಲ್ಲಿನ ನ್ಯೂನತೆಗಳ ಬಗ್ಗೆ ಪಾಲಿಕೆ ಕೇಂದ್ರ ಕಚೇರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ‘ವ್ಯವಸ್ಥಿತ ತಂತ್ರಾಂಶ ಸಿದ್ಧ ಗೊಳ್ಳುತ್ತಿರುವುದರಿಂದ ವಿಳಂಬವಾಗುತ್ತಿದೆ’ ಎಂಬ ಉತ್ತರ ಬರುತ್ತಿದೆ. ಹೀಗಾಗಿ, ಕಟ್ಟಡ ನಿರ್ಮಾಣ ಮಾಲೀಕರಿಗೆ ಸಬೂಬು ಹೇಳಬೇಕಾದಂತ ಪರಿಸ್ಥಿತಿ ನಿರ್ವಣವಾಗಿದೆ ಎಂದು ಪಾಲಿಕೆ ವಲಯ ಕಚೇರಿಯ ಅಧಿಕಾರಿಯೊಬ್ಬರು ಅಸಹಾಯಕತೆ ತೋಡಿಕೊಂಡಿದ್ದಾರೆ.

ಹಲವಾರು ಕಷ್ಟಗಳ ನಂತರ ಕಟ್ಟಡ ನಿರ್ವಣಕ್ಕೆಂದು ಬ್ಯಾಂಕ್ ನಿಂದ ಸಾಲ ಮಂಜೂರು ಮಾಡಿಸಿಕೊಂಡು ತಿಂಗಳುಗಳೇ ಕಳೆದಿವೆ. ಆದರೆ ಸ್ಥಳೀಯ ಪಾಲಿಕೆ ವತಿಯಿಂದ ನಕ್ಷೆ ಮಂಜೂರು ಹಾಗೂ ಪರವಾನಗಿಯನ್ನು ಪಡೆದು ಕೊಳ್ಳದೆ ಕಟ್ಟಡ ನಿರ್ವಣಕ್ಕೆ ಕೈ ಹಾಕá-ವಂತಿಲ್ಲ. ಇತ್ತ ಕಟ್ಟಡದ ಕೆಲಸವು ಪ್ರಾರಂಭಿಸá-ವಂತಿಲ್ಲ, ಅತ್ತ ಬ್ಯಾಂಕ್​ನವರಿಗೆ ಸಾಲದ ಬಡ್ಡಿ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. | ಎಂ. ಮುನಿರತ್ನಂ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net